ದೂಧಗಂಗಾ ಕಾರಖಾನೆ ಕಬ್ಬು ಅವ ಹಂಗಾಮಿಗೆ ಚಾಲನೆ

0
28
loading...

ಚಿಕ್ಕೋಡಿ 30: ಸ್ಥಳೀಯ ಶ್ರೀ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ ಪ್ರದೀಪನ ಹಾಗೂ ತೂಕ ಮಾಡುವ ಯಂತ್ರ ಮತ್ತು ಕೇನ ಕ್ಯಾರಿಯರಕ್ಕೆ ಪೂಜೆ ಸಲ್ಲಿಸಿ ಕೇನ ಕ್ಯಾರಿಯರದಲ್ಲಿ ಕಬ್ಬು ಹಾಕುವ ಮೂಲಕ ನಿಡಸೋಸಿ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಕಬ್ಬು ಅರೆಯುವ ಹಂಗಾಮಿಗೆ ಚಾಲನೆ ನೀಡಿದರು. ಈ ವೇಳೆಯಲ್ಲಿ ರಾಜ್ಯಸಭಾ ಸದಸ್ಯ ಡಾ|| ಪ್ರಭಾಕರ ಕೋರೆ, ಕಾರ್ಖಾನೆಯ ಅಧ್ಯಕ್ಷ ಅಮಿತ ಪ್ರಭಾಕರ ಕೋರೆ, ಉಪಾಧ್ಯಕ್ಷ ಭರತೇಶ ಬನವಣೆ, ಸಂಚಾಲಕ ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಅಣ್ಣಾಸಾಹೇಬ ಜೊಲ್ಲೆ, ಅಜೀತ ದೇಸಾಯಿ, ಸಾತಪ್ಪಾ ಸಪ್ತಸಾಗರ, ಪ್ರಕಾಶ ಪಾಟೀಲ, ಮಲ್ಲಿಕಾರ್ಜುನ ಕೋರೆ, .ಪರಸಗೌಡಾ ಪಾಟೀಲ, .ತಾತ್ಯಾಸಾಹೇಬ ಕಾಟೆ, .ಕಲ್ಲಪ್ಪಾ ಮೈಶಾಳೆ, .ಸುಭಾಷ ಕಾತ್ರಾಳೆ, .ಸಂದೀಪ ಪಾಟೀಲ, ಮಹಾವೀರ ಮಿರ್ಜಿ, ಬಾಳಗೌಡಾ ರೇಂದಾಳೆ, ನಂದಕುಮಾರ ನಾಶೀಪುಡಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀಶೈಲ ಎಸ್‌. ಶಿಂತ್ರಿ ಹಾಗೂ ಕಾರ್ಖಾನೆಯ ರೈತಸದಸ್ಯರು, ಅಧಿಕಾರಿಗಳು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.

loading...