ದೇಸಾಯಿ ಮನೆತನದ ಕೆಚ್ಚೆದೆಯ ಕುಡಿ ರಾಣಿ ಚೆನ್ನಮ್ಮ

0
24
loading...

ಬಂಕಾಪುರ : ಲೈಯನ್ಸ್ ನವಭಾರತ ವಿದ್ಯಾ ಸಂಸ್ಥೆಯಲ್ಲಿ 194 ನೇ ಕಿತ್ತೂರ ರಾಣಿ ಚೆನ್ನಮ್ಮ ಜಯಂತೋತ್ಸವದ ಅಂಗವಾಗಿ ಪ್ರೌಡ ಶಾಲಾ ಮುಖ್ಯ ಶಿಕ್ಷಕಿ ಜಿ.ಎಸ್.ದೇಸಾಯಿ ರಾಣಿ ಚೆನ್ನಮ್ಮನ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು 1778 ರಲ್ಲಿ ದೇಸಾಯಿ ಮನೆತನದಲ್ಲಿ ಜನಸಿದ ಮಗು ಮುಂದೆ ಬೆಳೆದು ಸ್ವಾತಂತ್ರ್ಯದ ವೀರ ಭಾವುಟವನ್ನು ಹಿಡಿದು ಬ್ರಿಟಿಸರ ವಿರುದ್ದ ಸಮರ ಸಾರಿದ ಪ್ರ ಪ್ರಥಮ ಮಹಿಳೆ ವೀರ ರಾಣಿ ಕಿತ್ತೂರ ಚೆನ್ನಮ್ಮ ಎಂದು ಹೇಳಿದರು.
ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಪೂರ್ತಿ ದಾಯಕಳಾದ ರಾಣಿ ಚೆನ್ನಮ್ಮ ನವರು ಕಿತ್ತೂರಿನ ನಾಡಿನ ಜನರ ಹೃದಯದಲ್ಲಿ ಸ್ವಾತಂತ್ರ್ಯದ ಜ್ಯೋತಿ ಬೆಳಗಿಸಿ ಬ್ರಿಟಿಷರ ಹೃದಯದಲ್ಲಿ ಬೆಂಕಿ ಜ್ವಾಲೆಯನ್ನು ಹೊತ್ತಿಸಿ ಸ್ವಾತಂತ್ರ್ಯದ ಉಳಿವಿಗಾಗಿ ಕೆಂಪು ವ್ರೆತಿಯ ಕುನ್ನಿ ಥ್ಯಾಕರೆಯನ್ನು ಗುಂಡಿಟ್ಟು ಕೊಂದು ಸ್ವಾತಂತ್ರ್ಯ ಉಳಿವಿಗಾಗಿ ತಾನು ಜ್ಯೋತಿಯಾಗಿ ಉರಿದು ಎಲ್ಲರ ಮನದಲ್ಲಿ ಅಮರವಾಗಿ ಉಳಿದವರು ರಾಣಿ ಚೆನ್ನಮ್ಮನವರು ಎಂದು ಹೇಳಿದರು.
ಶಿಕ್ಷಕರಾದ ಎಚ್.ಎನ್.ಹಳೆಮನಿ, ಎಮ್.ಬಿ.ರಾಯಾಪುರ, ಟಿ.ಬಿ.ಬಾರಿಗಿಡದ, ಜ್ಯೋತಿ ಕಟಗಿಮಠ, ತಾರಾ ಶಿಗ್ಗಾವಿ, ಸುರೇಶ ಮುರಿಗೆಣ್ಣವರ, ನವೀನಾ ನಾಯಕ, ಸುಮಾ ಗುಡ್ಡಪ್ಪನವರ, ರಮೇಶ ಛಬ್ಬಿ ಮತ್ತಿತರರು ಉಪಸ್ಥಿತರಿದ್ದರು

loading...