ಧಾರವಾಡದಲ್ಲಿ‌ ನಮೋ‌ ಕ್ಯಾಂಟಿನ್ ‌ಉದ್ಘಾಟಿಸಿದ ಮಾಜಿ ಮೇಯರ್

0
30
loading...

ಕನ್ನಡಮ್ಮ ಸುದ್ದಿ
ಧಾರವಾಡದ:29 ತನ್ನ ಬಂಧುಗಳೊಡನೆ ಚಹಾ ಮಾರುತ್ತಿದ್ದ ಹುಡುಗ ಆಧ್ಯಾತ್ಮದ ಮೆಟ್ಟಿಲೇರಿ ಮಾಜಿ ಪ್ರಧಾನಿ ಆದರ್ಶವಾದಿ ಮುತ್ಸದ್ದಿ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಅವರ ಆತ್ಮೀಯ ಶಿಷ್ಯನಾಗಿ ಬೆಳೆದು ಬಂದು ಚಹಾ ಕುಡಿದವರು ಕಪ್ಪು ಬಸಿಗಳನ್ನು ತೊಳೆದು ದೇಶದ ಒಂದು ರಾಜ್ಯದಮುಖ್ಯಮಂತ್ರಿಯಾಗಿ ನಂತರ ಜನ ಸಾಮಾನ್ಯರ ಸೇವಕನಾಗಿ ಭಾರತ ಮಾತೆಯ ನೆಚ್ಚಿನ ಪುತ್ರನಾಗಿ ಇಂದು ದೇಶದ ಪ್ರಧಾನಿ ಹುದ್ದೆಯಲ್ಲಿರುವ ನರೇಂದ್ರ ಮೋದಿ ಸಾಮಾನ್ಯ ಕಾಯಕವನ್ನು ಅಸಾಮಾನ್ಯ ಎಂದು ಹೇಳುವ ಮೂಲಕ ವಿಶ್ವದ ಪ್ರಜ್ಞಾವಂತ ಪ್ರಜೆಯಾಗಿ ಭಾರತವನ್ನು‌ ಗುರುತಿಸುವ ನರೇಂದ್ರನಾಗಿ ಕಂಗೊಳ್ಳಿಸುತ್ತಾನೆ.
ಚಹಾ ಅಂಗಡಿ ಎಂಜಲು ತೊಳೆಯುವ ಉದ್ಯೋಗವಲ್ಲ. ಅದೊಂದು ಜನಸೇವೆಯ ಪ್ರತಿಕ. ಕಾಯಕವನ್ನು ಎತ್ತರಕ್ಕೇರಿಸುವ ಪ್ರಯತ್ನ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಚಹಾ ಅಂಗಡಿ ಕರ್ನಾಟಕ ರಾಜ್ಯದ ವಿದ್ಯಾ ಕಾಶಿಯೆಂದೆ ಗುರುತಿಸಲ್ಪಡುವ ಧಾರವಾಡದ ನವೋದಯ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರ ಪ್ರೇಮ ಮತ್ತು ಕಾಯಕದ ಮೇಲ್ದರ್ಜೆಯ ಸಂಕೇತವಾಗಿ ಶುಭ ದೀಪಾವಳಿಯ ಬೆಳಕಿನ ಹಬ್ಬದ ಕೊಡುಗೆಯಾಗಿ ಸಮಾನ ಮನಸ್ಕ ಗೆಳೆಯರ ಬಳಗ ಒಟ್ಟು ಸೇರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಕ್ಯಾಂಟಿನ್ ಆರಂಭಿಸುವ ಮೂಲಕ ಬೆಳಕಿನ ಹಬ್ಬಕ್ಕೆ ವಿದ್ಯಾಕಾಶಿಯ ಜನತೆ ಒಂದು ಚಹಾದಂಗಡಿ ಆರಂಭಿಸಿದ್ದಾರೆ.
ಈಗಾಗಲೇ ರಾಜ್ಯದ ಎಲ್ಲ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಇಂದಿರಾ ಹೆಸರಿನಲ್ಲಿ ಸಾರ್ವಜನಿಕರಿ ಅಗ್ಗದ ದರದಲ್ಲಿ ಉಪಹಾರ ಅಲ್ಪೋಪಹಾರದ ಮೂಲಕ ಕ್ಯಾಂಟಿನ್ ಆರಂಭಿಸಿದೆ. ಇದೊಂದು ರಾಜಕೀಯ ಪಕ್ಷದ ರಾಜಕೀಯ ನೀತಿಯೂ ಹೌದು. ಆದರೆ ಯಾವುದೇ ರಾಜಕೀಯ ಪ್ರೇರಣೆ ಇಲ್ಲದೆ, ರಾಜಕೀಯ ಪಕ್ಷದ ಒಲವಿಲ್ಲದೆ ನರೇಂದ್ರ ಮೋದಿ ಹೆಸರಿನಲ್ಲಿ ಜನಸಾಮಾನ್ಯರ ಜೇಬಿಗೆ ಹೊರೆಯಾಗದಂತೆ ಉದರಕ್ಕೆ ಸಿಹಿಯಾಗುವಂತೆ ಹಸಿವು, ತೃಷ್ಯ ನಿಗುವಂತೆ ನರೇಂದ್ರ ಮೋದಿ ಹೆಸರಿನಲ್ಲಿ ಧಾರವಾಡದ ಯುವ ಬಳಗ ದೇಶಕ್ಕೆ ಮಾದರಿಯಾಗಿ ಜನಸಾಮಾನ್ಯರಿಗೆ ಶುಚಿ, ರುಚಿ, ಸ್ವಚ್ಛತೆ ಈ ಎಲ್ಲವನ್ನು ಮೈಗೂಡಿಸಿಕೊಂಡು‌ಮೋದಿ ಹೆಸರಿನಲ್ಲಿ ಉಪಹಾರದ ಕ್ಯಾಂಟಿನ್ ಆರಂಭಿಸಿರುವುದು ಇಡೀ‌ ಭಾರತದಲ್ಲಿಯೇ ಒಂದು ಯುವ ಆದರ್ಶ‌ಮಾದರಿಯಾಗಿದೆ.
ಶಿವರಾಮ್ ತಲವಾಯಿ ಹಾಗೂ‌ ಯುವ ತಂಡದ ಮಾದರಿ ಎಲ್ಲರಿಗೂ ಆದರ್ಶವಾಗಲಿ ಎಂದು ಶುಭ ಹಾರೈಸಿದ ಮಾಜಿ ಮೇಯರ್ ಶಿವು ಹಿರೇಮಠ.

 

loading...