ಧುಪದಾಳದಲ್ಲಿ ಮನೆ ಮನೆಗೆ ಕಾಂಗ್ರೆಸ ಕಾರ್ಯಕ್ರಮ

0
47
loading...

ಘಟಪ್ರಭಾ: ಧುಪದಾಳ ಗ್ರಾಮ ಪಂಚಾಯತ ವ್ಯಾಪ್ತಿಯ ಬೂತ್‌ ನಂ 9-10 ರ ಮತದಾರಗೆ ಕಾಂಗ್ರೆಸ್‌ ಕಾರ್ಯಕರ್ತರು ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ ಹಮ್ಮಿಕೊಂಡಿದರು.
ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮದ ಅಂಗವಾಗಿ ಮನೆಗಳಿಗೆ ತೆರಳಿ ಐದು ವರ್ಷಗಳ ಅವಧಿಯಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಅನ್ನಭಾಗ್ಯ. ಕ್ಷೀರಭಾಗ್ಯ ಯೋಜನೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿ ಪೈಪಿಡಿ ವಿತರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್‌ ವಿಭಾಗ ಮಟ್ಟದ ಸದಸ್ಯ ಕಲ್ಲೋಳೆಪ್ಪಾ ಗಾಡಿವಡ್ಡರ, ಕಾಂಗ್ರೆಸ್‌ ಕಾರ್ಯಕರ್ತ ತಾಪಂ ಸದಸ್ಯ ಲಗಮಣ್ಣಾ ನಾಗನ್ನವರ, ಹಣಮಂತ ಗಾಡಿವಡ್ಡರ, ಮಹೇಶ ಪಾಟೀಲ, ಮದಾರಸಾಬ ಜಗದಾಳ, ಪರಶುರಾಮ ಗಾಡಿವಡ್ಡರ, ಜಿನ್ನಪ್ಪಾ ಕಮತಿ, ಶೆಟ್ಟೆಪ್ಪಾ ಗಾಡಿವಡ್ಡರ, ಭರತೇಶ ಪರಪ್ಪನವರ, ಲಗಮಣ್ಣಾ ಗಾಡಿವಡ್ಡರ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

loading...