ನಂ 02 ಸುಂದರ ನಗರ ನಿರ್ಮಾಣದಲ್ಲಿ ಇಂಜನೀಯರಗಳ ಪಾತ್ರ ಮಹತ್ವದ್ದು

0
15
loading...

ಧಾರವಾಡ- ಇಂದು ಸಮಾಜದಲ್ಲಿ ನಿತ್ಯ ಬದಲಾವಣೆಗಳು ಆಗುತ್ತಿವೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಇಂಜನೀಯರಗಳು, ವೈದ್ಯರ ಬಗ್ಗೆ ದೂಷಣೆ ಮಾಡುವುದನ್ನೇ ಕಾಣುತ್ತಿದ್ದೇವೆ ಎಂದು ರಾಜೀವಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಜಿಸ್ಟ್ರರ್ ಸಿ.ಎಂ.ನೂರಮನ್ಸೂರ ಹೇಳಿದರು.
ಡಾ.ಅಂಬೇಡ್ಕರ್ ಭವನದಲ್ಲಿ ಅಸೋಶಿಯೇಷನ್ ಆಫ್ ಕನ್ಸಲ್ಟಿಂಗ್ ಸಿವ್ಹಿಲ್ ಇಂಜನೀಯರ್ಸ್ (ಇಂಡಿಯಾ), ಧಾರವಾಡ ಸೆಂಟರ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸುಂದರ ನಗರ ನಿರ್ಮಾಣದಲ್ಲಿ ಇಂಜನೀಯರಗಳ ಪಾತ್ರ ಮಹತ್ವದ್ದಾಗಿದೆ ಇಂಜನೀಯರಗಳು ತಮ್ಮ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಬೇಕು. ಜನರಲ್ಲಿ ಬೇರೂರಿರುವ ಮನೋಭಾವನೆ ಬದಲಾಗಲು ಇಂಜನೀಯರಗಳು ಸ್ಪಷ್ಟತೆ ನೀಡಲು ಪ್ರಯತ್ನಿಸಬೇಕು. ಜನರಲ್ಲಿ ಇಂಜನೀಯರಗಳು ಮತ್ತು ವೃತ್ತಿಯ ಮೇಲಿನ ಧೋರಣೆ ಬದಲಾಗಲು ಸಾಧ್ಯ ಎಂದರು.

ಎ.ಆರ್.ಅಮ್ಮಿನಭಾವಿ,ಸುನೀಲ ಬಾಗೇವಾಡಿ, ಬಿ.ವೈ.ಏಣಗಿ, ಬಿ.ಎಚ್.ಜಾಧವ, ಸಂಜಯ ಕಬ್ಬೂರ, ಶಾಂತವೀರ ಬೆಟಗೇರಿ, ಆರ್.ಕೆ.ಹೆಗಡೆ, ವಿನೋದ ಕುಸುಗಲ್ಲ, ಚಿದಂಬರ ನಾಡಗೌಡ, ಅರವಿಂದ ದೇಶಮುಖ, ರಾಜು ಬಿರ್ಜಣ್ಣವರ, ಎಸ್.ಎ.ನೀರಲಗಿ, ಈ.ಎಚ್.ಕಡ್ಲಿಮಟ್ಟಿ ಪಾಲ್ಗೊಂಡಿದ್ದರು. ಅರವಿಂದ ಕಪಲಿ ಸ್ವಾಗತಿಸಿದರು. ಶೋಭಾ ಜೋಶಿ ನಿರೂಪಿಸಿದರು. ದೇವರಾಜ ಕಂಬಳಿ ವಂದಿಸಿದರು.

loading...