ನಮ್ಮ ನಡೆ ಆರೋಗ್ಯದೆಡೆಗೆ : ಶಿವಾನಂದ

0
26
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಗ್ರಾಮೀಣ ಜನರ ಆರೋಗ್ಯದೆಡೆಗೆ ವಿಶೇಷವಾಗಿ ಮಕ್ಕಳ ಹಾಗೂ ಮಹಿಳೆಯರ ಪೌಷ್ಠಿಕ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಆರ್‍ಸಿಯು ಕುಲಪತಿ ಪ್ರೊ. ಶಿವಾನಂದ ಹೊಸಮನಿ ಹೇಳಿದರು.
ವಿಶ್ವವಿದ್ಯಾಲಯ ಕೈ ಜೋಡಿಸಿ ಬಲಗೊಳಿಸುವುದನ್ನು ಕಾರ್ಯರೂಪಕ್ಕೆ ತರುತ್ತ್ತಿದೆ ಎಂದು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಹಿಳಾ ಸಬಲೀಕರಣ ಘಟಕ, ರೆಡಕ್ರಾಸ್, ಎನ್‍ಎಸ್‍ಎಸ್ ಕೋಶ, ಎಸ್.ಸಿ/ಎಸ್.ಟಿ ಘಟಕ, ಸಮಾಜಕಾರ್ಯ ವಿಭಾಗ, ಲೈಯನ್ಸ್ ಕ್ಲಬ್ ಬೆಳಗಾವಿ ಹಾಗೂ ವಿಜಯಾ ಆಸ್ಪತ್ರೆಯವರು ಸಹಯೋಗದಲ್ಲಿ ನಡೆದ ಕಾರ್ಯಕ್ರಮ ಮಾತನಾಡಿದ ಅವರು,
ಪ್ರತಿ ಪ್ರಜೆಯ ಆರೋಗ್ಯದ ಮೇಲೆ ಸಮಾಜದ ಆರೋಗ್ಯ ಅವಲಿಂಬಿಸಿದೆ. ಆರೋಗ್ಯದ ಬಗ್ಗೆ ಪೂರ್ವ ತಿಳುವಳಿಕೆ ನೀಡುವ ಕಾರ್ಯವನ್ನು ಸಮಾಜದಲ್ಲಿನ ವಿವಿದ ಸಂಘಟನೆಗಳೊಂದಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಸಿದ್ಧು ಪಿ. ಆಲಗೂರ, ಲೈಯನ್ಸ್ ಸಂಸ್ಥೆಯ ಅಧ್ಯಕ್ಷ ಡಾ.ಹಾಲಭಾವಿ, ಬಂಬರಗಾ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ವಿಶ್ವವಿದ್ಯಾಲಯದ ಡಾ.ಚಂದ್ರಕಾಂತ ವಾಘಮೋರೆ, ಡಾ.ಶೀಗೆಹಳ್ಳಿ, ಡಾ.ಕನಕಪ್ಪ ಪೂಜಾರ, ಯಾಸ್ಮಿನಬೇಗಂ ನದಾಫ, ಡಾ. ಮಹಾಂತಪ್ಪ ಚಲವಾದಿ ಮತ್ತು ವೈದ್ಯರು ಉಪಸ್ಥಿತರಿದ್ದರು. ಡಾ.ಮನೀಶಾ ನೇಸರಕರ ನಿರೂಪಿಸಿದರು, ಡಾ.ಮಹೇಶ್ವರಿ ಕಾಜಾಪೂರ ವಂದಿಸಿದರು.

loading...