ನಿಪ್ಪಾಣಿಯಲ್ಲಿ ಅದ್ದೂರಿಯಿಂದ ರಾಜ್ಯೋತ್ಸವ ಆಚರಣೆ: ವಿಲಾಸ ಗಾಡಿವಡ್ಡರ

0
18
loading...

ನಿಪ್ಪಾಣಿ: ಬರುವ ನವೆಂಬರ ಒಂದರಂದು ಜರಗುವ ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ಅದ್ದೂರಿಯಾಗಿ ಆಚರಿಸಲು ಬೇಕಾದ ಅಗತ್ಯ ನೆರವನ್ನು ನಗರಸಭೆಯಿಂದ ನೀಡಲಾಗುವುದೆಂದು ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ ಭರವಸೆ ನೀಡಿದರು. ಮಂಗಳವಾರ ನಗರಸಭೆಯ ಸಭಾಭವನದಲ್ಲಿ ಜರುಗಿದ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಭೆಯಲ್ಲಿ ಗಡಿನಾಡು ಕನ್ನಡ ಬಳಗದ ಅಧ್ಯಕ್ಷ ಮಾರುತಿ ಕೊಣ್ಣುರಿ ಮಾತನಾಡಿ, ರಾಜ್ಯೋತ್ಸವ ಪೂರ್ವಭಾವಿ ಸಭೆ ವಿಳಂಬವಾದದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಾ ಮುಂಬರುವ ದಿನಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಅನುವಾಗುವಂತೆ ಸಭೆಯನ್ನು ನಡೆಸಲು ಆಗ್ರಹಿಸಿದರು. ನಗರಸಭೆಯ ಉಪಾಧ್ಯಕ್ಷ ಸುನೀಲ ಪಾಟೀಲ, ಸದಸ್ಯರಾದ ರವೀಂದ್ರ ಚಂದ್ರಕುಡೆ, ನಜಹತ್‌ ಪರ್ವೀಣ್‌ ಮುಜಾವರ,ಮಹಾದೇವ ಬರಗಾಲೆ, ವಿದ್ಯಾವತಿ ಜನವಾಡೆ, ಮಿಥುನ ಅಂಕಲಿ, ಈರಣ್ಣ ಗಿರಿಮಲ್ಲಣ್ಣವರ ಸೇರಿದಂತೆ ಇತರರು ಸಲಹೆ-ಸೂಚನೆಗಳನ್ನು ನೀಡಿದರು.ಸಭೆಯಲ್ಲಿ ಹೆಚ್ಚಾಗಿ ಕೆಲ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಿ ಎದ್ದು ಕಂಡಿತು. ಹೊಸದಾಗಿ ಕೆಲ ಸಮಿತಿಗಳನ್ನು ರಚಿಸಿ ಜವಾಬ್ದಾರಿಯನ್ನು ಹಂಚಲಾಯಿತು.ಸಭೆಯಲ್ಲಿ ನಗರಸಭೆ ಆಯುಕ್ತ ದೀಪಕ ಹರದಿ, ಎಸ್‌.ಕೆ.ಖಜ್ಜನ್ನವರ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ವ್ಹಿ.ಕೆ.ಸನ್ಮೊರೆ, ಸುರೇಶ ಕಾನಪೇಟ, ಎಸ್‌.ಎಲ್‌.ಕಾಮನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಮುಖ್ಯಸ್ಥರು, ಕನ್ನಡ ಸಂಘಟನೆಗಳ ಮುಖಂಡರು, ಪತ್ರಕರ್ತರು, ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು. ನಗರಸಭೆಯ ಅಧಿಕಾರಿ ವಿವೇಕ ಬನ್ನೆ ಸ್ವಾಗತಿಸಿದರು. ಸುಭಾಷ ಮಾನೆ ವರದಿ ವಾಚಿಸಿದರು. ಅಧ್ಯಕ್ಷ ವಿಲಾಸ ಗಾಡಿವಡ್ಡರ ವಂದಿಸಿದರು.

loading...