ನೆಮ್ಮದಿಯ ಮನಸ್ಸು ಜೀವನದ ಯಶಸ್ಸು: ಸಿ.ಆರ್.ಚಂದ್ರಶೇಖರ್

0
33
loading...

ಕೊಪ್ಪಳ : ಜೀವನ ಪದ್ಧತಿ ಬದಲಾವಣೆಯಿಂದ ಭಾವೋದ್ವೇಗ, ಆತಂಕ, ಭಯ, ಖಿನ್ನತೆಗಳಿಂದ ಮಾನಸಿಕ ಒತ್ತಡಗಳಿಗೆ ಒಳಗಾಗಿ ಮನಸ್ಸಿಗೆ ನೆಮ್ಮದಿ ಇಲ್ಲದಾಗಿದೆ ಎಂದು ಖ್ಯಾತ ಮನೋವೈದ್ಯರಾದ ಡಾ. ಸಿ. ಆರ್. ಚಂದ್ರಶೇಖರ್ ಹೇಳಿದರು.
ಕಲಬುರ್ಗಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ವಿಕಾಸ ಆಕಾಡೆಮಿ ಹಾಗೂ ಕೊಪ್ಪಳ ನಗರದ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಶ್ರಯದಲ್ಲಿ ನಗರದ ಗವಿಸಿದೇಶ್ವರ ಮಹಾವಿದ್ಯಾಲಯದಲ್ಲಿ ನಡೆದ ಹವ್ಯಾಸಿ ಆಪ್ತ ಸಮಾಲೋಚಕರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಒತ್ತಡದ ಜೀವನದ ಬದುಕು, ಮನಸ್ಸಿನ ಆಲೋಚನೆಗಳು ಬದಲಾಗಬೇಕು ಮೊದಲು ಮನಸ್ಸಿಗೆ ನೆಮ್ಮದಿ ತಂದುಕೊಳ್ಳುವ ಚಟುವಟಿಕೆಗಳಲ್ಲಿ ತೊಡುಗುವುದು ಬಹು ಮುಖ್ಯವಾಗಿದೆ. ಇಂದು ಒಬ್ಬ ರೋಗಿಯನ್ನು ಆತನ ಕಾಯಿಲೆ ಕಂಡು ಹಿಡಿಯುವ ಬದಲು ಕೇವಲ ಔಷಧ ನೀಡಿದರು ಸಾಲದು ಕಾಯಿಲೆಗೆ ಮೂಲ ಕಾರಣವನ್ನು ಕಂಡುಹಿಡಿಯುವ ಕೆಲಸವಾಗಬೇಕು ಆದರೆ ಇಂದು ಆರೋಗ್ಯ ಕ್ಷೇತ್ರವು ವಾಣಿಜ್ಯಕರಣ, ವ್ಯಾಪಾರವಾಗುತ್ತಿರುವದರಿಂದ ರೋಗಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.
ಮುಖ್ಯವಾಗಿ ಮನಸ್ಸಿನ ಆರೋಗ್ಯದ ಬರ್ಧನೆಗೆ ಹೆಚ್ಚು ಗಮನ ನೀಡಿ, ಹಣದಿಂದ ಔಷಧವನ್ನು ವೈದ್ಯರನ್ನು ಖರೀದಿಸಬಹುದು ಆದರೆ ಆರೋಗ್ಯವನ್ನು ಖರೀದಿಸಲು ಸಾಧ್ಯವಿಲ್ಲ. ಸತತ ಪ್ರಯತ್ನ, ಸಾಧನೆ, ಮುಂಜಾಗ್ರತಾ ಕ್ರಮಗಳಿಂದ ಶೇ 75% ರಷ್ಟು ರೋಗಗಳು ಬರದಂತೆ ತಡೆಯಬಹುದು. ಹಾಗೇ ಮಾನಸಿಕ ಒತ್ತಡಗಳಿಗೆ ಒಳಗಾಗದೇ ಶಾಂತಚಿತ್ತ ಮನಸ್ಸು, ನೆಮ್ಮದಿ ತರುವ ಸಕಾರಾತ್ಮಕ ಆಲೋಚನೆಗಳ ಮೂಲಕ ಸದೃಡ ಬದುಕಿಗೆ ಪ್ರಯತ್ನಿಸಬೇಕೆಂದ ಅವರು ಪ್ರಸ್ತುತ ತಾವು ರಾಜ್ಯದಲ್ಲಿ ಪ್ರವಾಸ ಮಾಡಿ ಮನೋರೋಗಿಗಳಿಗೆ ಚಿಕಿತ್ಸೆ, ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಶಿಕ್ಷಣ ನೀಡುತ್ತಿದ್ದು, ಬೆಂಗಳೂರಲ್ಲಿ ಸಮಾಧಾನ ಕೇಂದ್ರದ ಮೂಲಕ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯಸಭಾ ಸದಸ್ಯರು, ಕಲಬುರ್ಗಿ ವಿಕಾಸ ಅಕಾಡೆಮಿ ವಿಭಾಗೀಯ ಸಂಚಾಲಕರಾದ ಬಸವರಾಜ ಪಾಟೀಲ ಸೇಡಂ ಅವರು ಮಾತನಾಡಿ ಇಂದಿನ ಯಾಂತ್ರಿಕ ಬದುಕಿನಲ್ಲಿ ಎಲ್ಲರೂ ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾರೆ. ಪರಿಣಾಮ ಅನೇಕ ಕಾಯಿಲೆಗಳಿಗೆ ತುತ್ತಾಗಿ ಮಾನಸಿಕ ಖಿನ್ನತೆ ಹೆಚ್ಚಿದೆ, ಹೀಗಾಗಿ ಚಿಕ್ಕ ಮಕ್ಕಳಿಂದ ವೃದ್ಧರವರೆಗೂ ಆಪ್ತ ಸಮಾಲೋಚನೆ ಅಗತ್ಯವಿದೆ. ಈ ಹಿನ್ನಲೇಯಲ್ಲಿ ಗವಿಸಿದ್ದೇಶ್ವರ ಆಯುರ್ವೇದ ಆಸ್ಪತ್ರೆಯಲ್ಲಿ ಅ.23 ರಿಂದ 6 ದಿನಗಳ ಕಾಲ ಹವ್ಯಾಸಿ ಆಪ್ತ ಸಮಾಲೋಚಕರ ತರಬೇತಿ ಕಾರ್ಯಾಗಾರದಲ್ಲಿ ಖ್ಯಾತ ಮನೋವೈದ್ಯ ಸಿ.ಆರ್.ಚಂದ್ರಶೇಖರ್ ನೇತೃತ್ವದಲ್ಲಿ 8 ಜನರ ತಜ್ಞ ವೈದ್ಯರ ತಂಡ ಶಿಬಿರಾರ್ಥಿಗಳಿಗೆ ತರಬೇತಿ ನೀಡುವರು ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಮಹಾವಿದ್ಯಾಲಂiÀiದ ಪ್ರಾಚಾರ್ಯರಾದ ಪ್ರಕಾಶ ಬಡಿಗೇರ.ಕಿಮ್ಸ ನಿರ್ದೆಶಕರಾದ ಡಾ ಮಲ್ಲಪೂರೆ,ಡಾ ದಾನರೆಡ್ಡಿ, ತಾಲೂಕ ಸಂಚಾಲಕ ಸಿದ್ದಾರಡ್ಡಿ ಇತರ ಪ್ರಮುಖರು ಉಪಸ್ಥಿತರಿದ್ದರು. ಮೇಘಾ ಕುಲಕರ್ಣಿ ಪ್ರಾರ್ಥಿಸಿದರು. ಕಾರ್ಯಕ್ರದ ಪ್ರಧಾನ ಸಂಯೋಜಕರಾದ ಎಸ್ ಎಸ್ ಹಿರೇಮಠ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಸೊಪ್ಪಮಠ ಕಾರ್ಯಕ್ರಮ ನಿರ್ವಹಿಸಿದರು. ಆರ್.ಎಂ ಅಂಗಡಿ ವಂದಿಸಿದರು.

loading...