ಪಾಕ್ ಭಯೋತ್ಪಾದನೆ ನಿಗ್ರಹಿಸಲಿ: ಜಿಮ್ ಮ್ಯಾಟಿಸ್

0
20
loading...

ವಾಷಿಂಗ್ಟನ್:- ಭಯೋತ್ಪಾದನೆ ಪಾಕಿಸ್ತಾನ ನೀಡುತ್ತಿರುವ ಕುಮ್ಮಕ್ಕಿನ ವಿರುದ್ಧ ಧನಿ ಎತ್ತಿರುವ ಭಾರತದಲ್ಲಿ ಅಮೆರಿಕದಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಭಾರತದಿಂದ ಸದೃಢ ಆರ್ಥಿಕ ಅನುಕೂಲಗಳು ಬೇಕಾದರೆ ಭಯೋತ್ಪಾದನೆಯನ್ನು ನಿಗ್ರಹಿಸಿ ಎಂದು ಅಮೆರಿಕ ಪಾಕ್‍ಗೆ ಸಲಹೆ ನೀಡಿದೆ.
ಪಾಕ್ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗುವುದನ್ನು ತಪ್ಪಿಸಿ, ಉಗ್ರಗಾಮಿಗಳನ್ನು ಪಾಕಿಸ್ತಾನ ನಿರ್ಮೂಲನೆ ಮಾಡಿದ್ದೇ ಆದರೆ ಭಾರತದಿಂದ ಅದಕ್ಕೆ ದೊಡ್ಡ ಮಟ್ಟದಲ್ಲಿ ಆರ್ಥಿಕ ಪ್ರಯೋಜನವಾಗಲಿದೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಹೇಳಿದ್ದಾರೆ.
ವಾಷಿಂಗ್ಟನ್‍ನಲ್ಲಿ ಬುಧವಾರ ಸೆನೆಟ್ ಸಶಸ್ತ್ರ ಸೇವೆಗಳ ಸಮಿತಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನದಿಂದ ಅಮೆರಿಕ ಏನನ್ನು ಬಯಸುತ್ತದೆ ಎಂಬ ಬಗ್ಗೆ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಏಷ್ಯಾ ಖಂಡದಲ್ಲಿ ಅದರಲ್ಲೂ ಪಾಕಿಸ್ತಾನದ ಧೋರಣೆಯನ್ನು ಬದಲಿಸಲು ಟ್ರಂಪ್ ಸರ್ಕಾರವು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

loading...