ಪಾಕ್ ವಿರುದ್ಧ ಟ್ರಂಪ್ ಗರಂ

0
21
loading...

ವಾಷಿಂಗ್‍ಟನ್:- ಉಗ್ರರಿಗೆ ಸುರಕ್ಷಿತವಾಗಿರುವ ಪಾಕಿಸ್ತಾನ ವಾತಾವರಣವನ್ನು ಕಲ್ಪಿಸುತ್ತಿರುವುದು ಅಮೆರಿಕದ ಸಹನೆಯನ್ನು ಪರೀಕ್ಷೆ ಮಾಡುತ್ತಿದ್ದು, ಡೊನಾಲ್ಡ್ ಟ್ರಂಪ್ ಪಾಕ್‍ನ ಭಯೋತ್ಪಾದನೆ ನಡೆಗೆ ಕೆಂಡಾಮಂಡಲವಾಗಿದೆ.
ಮಿಲಿಯನ್ ಡಾಲರ್ ಗಟ್ಟಲೆ ಹಣವನ್ನು ನೆರವಿನ ರೂಪದಲ್ಲಿ ನೀಡಲಾಗುತ್ತಿದ್ದರೂ ಪಾಕಿಸ್ತಾನ ಅದರ ಸದುಪಯೋಗ ಪಡೆಯದೇ ಹಣವನ್ನು ಉಗ್ರರಿಗೆ ನೆರವಾಗುವ ರೀತಿಯಲ್ಲಿ ಬಳಕೆ ಮಾಡುತ್ತಿದೆ ಎಂದು ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಪಾಕಿಸ್ತಾನಕ್ಕೆ ಭಯೋತ್ಪಾದನೆಗೆ ಸಂಬಂಧಿಸಿದಂತೆ ಟ್ರಂಪ್ ಕಠಿಣ ಸಂದೇಶ ರವಾನೆ ಮಾಡಲು ಸಿದ್ಧತೆ ನಡೆಸಿದ್ದು, ತಮ್ಮ ಆಡಳಿತದ ಉನ್ನತ ಅಧಿಕಾರಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಿದ್ದಾರೆ.

loading...