ಪೈಪೋಟಿಗಾಗಿ ಜಿದ್ದಾ-ಜಿದ್ದಿ ಡೊಳ್ಳಿನ ಪ್ರದರ್ಶನ

0
33
loading...

ಕಾಗವಾಡ 06: ನವರಾತ್ರೋತ್ಸವ ಮತ್ತು ಮಹಾತ್ಮಾ ಗಾಂಧೀಜಿಯವರ ಜಯಂತಿ ನಿಮಿತ್ಯ ಅಥಣಿ ತಾಲೂಕಿನ ಶಿರಗುಪ್ಪಿ ಗ್ರಾಮದ ಶ್ರೀ ವಿಘ್ನೇಶ್ವರ ತರುಣ ಮಂಡಳ ಇವರಿಂದ ಆಯೋಜಿಸಿದ ಅಂತರ ರಾಜ್ಯ ಜಿದ್ದಾ ಜಿದ್ದಿನ ಡೊಳ್ಳಿನ ಸ್ಪರ್ಧೆಗಳು ಬುಧವಾರ ರಾತ್ರಿ ಜರುಗಿದವು.ಶಿರಗುಪ್ಪಿ ಗ್ರಾಮದ ಶ್ರೀ ಮಾಯಕ್ಕಾ ದೇವಸ್ಥಾನದ ಆವರಣದಲ್ಲಿ ಡೊಳ್ಳಿನ ಸ್ಪರ್ಧೆ ಹಮ್ಮಿಕೊಂಡಿದ್ದರು. ಪ್ರಥಮ ಸ್ಥಾನ ಧುಳ ಬೀರದೇವ ವಾಲಗ ಮಂಡಳ ಗಡಮುಡಶಿಂಗಿ ಕೊಲ್ಹಾಪೂರ ಪಡೆದು 11,001/- ರೂ. ನಗದು ಮತ್ತು ಬೆಳ್ಳಿ ಗದೆ ತಮ್ಮದಾಗಿಸಿಕೊಂಡರು. ದ್ವಿತೀಯ ಲಕ್ಷ್ಮೀ ವಾಲಗ ಮಂಡಳ ಬೆಡಗ ಮಿರಜ 7,001 ಮತ್ತು 5 ಅಡಿ ಎತ್ತರದ ಢಾಲ ಪಡೆದರೆ, ತೃತೀಯ ಸ್ಥಾನವನ್ನು ಲಕ್ಷ್ಮೀ ವಾಲಗ ಮಂಡಳ ನರವಾಡ ಮಿರಜ್‌) 5,001 ನಗದು ಹಾಗೂ ಢಾಲ ಮತ್ತು ನಾಲ್ಕನೇ ಬಹುಮಾನ ಬೀರುದೇವ ವಾಲಗ ಮಂಡಳ ಶೇಡಬಾಳ 3,001/- ಢಾಲ, ಐದನೆ ಬಹುಮಾನ ಶ್ರೀ ಮಾಯಕ್ಕಾ ವಾಲಗ ಮಂಡಳ ಚಿಂಚಲಿ 2,001/- ಮತ್ತು ಢಾಲ ಸ್ಪರ್ಧೆಯಲ್ಲಿ ಯಶಸ್ವಿಯಾದರು. 30 ಮಂಡಳಗಳು ಸ್ಪರ್ಧಿಸಿದ್ದವು.ಬಹುಮಾನ ಪ್ರಾಯೋಜಿಸಿದ ಬೊಮ್ಮಣ್ಣ ಚೌಗುಲೆ, ಪ್ರಕಾಶ ಅಕಿವಾಟೆ, ಪ್ರಮೋದ ಭೋಲೆ, ಪಂಡಿತ ವಡ್ಡರ, ಸುಭಾಷ ಮೋನೆ, ಡಾ. ಅಮೂಲ ಸರಡೆ, ಡಾ. ಎಮ್‌.ಎನ್‌. ಭೋಮಾಜ, ದತ್ತಾತ್ರೇಯ ಧಾರವಾಡೆ, ರುದ್ರಗೌಡಾ ಪಾಟೀಲ, ಸದಾಶಿವ ಪೂಜಾರಿ, ಭೀಮು ಭೋಲೆ, ಬಿ.ಎಸ್‌.ಪಿ. ಪಕ್ಷದ ಮುಖಂಡ ಶಿವಾನಂದ ನವನಾಳೆ, ಮಹಾಂತೇಶ ಸುರ್ಯವಂಶಿ ಇವರನ್ನು ಗ್ರಾ.ಪಂ ಅಧ್ಯಕ್ಷ ಮಹಮ್ಮದ ಗೌಂಡಿ, ರಾಮಗೌಡಾ ಪಾಟೀಲ ಇವರು ಸನ್ಮಾನಿಸಿದರು. ಸ್ಪರ್ಧೆ ಆಯೋಜಿಸಿದ ವಿಘ್ನೇಶ್ವರ ಮಂಡಳದ ವಿನಾಯಕ ಘಾಟಗೆ, ಅಜೀತ ಹಡಪದ, ಹಾಲಪ್ಪ ಕಟ್ಟಿಕರ, ರುಷಬ ಚೌಗುಲಾ ಇವರನ್ನು ಸಹ ಸನ್ಮಾನಿಸಲಾಯಿತು.

loading...