ಪ್ರತಿಯೊಬ್ಬರು ನಾಡು-ನುಡಿಯ ಸೇವೆ ಮಾಡಿ: ಶ್ರೀಗಳು

0
44
loading...

ಕೋಳಿಗುಡ್ಡ 30: ನಮ್ಮ ನಾಡು ತನ್ನದೆ ಆದ ಹಿರಿಮೆ, ಪರಂಪರೆ, ವಿವಿದ ಸಂಸ್ಕೃತಿಗಳನ್ನು ಹೋಂದಿದ ರಾಜ್ಯವಾಗಿದೆ. ಮೈಸುರು ರಾಜ್ಯದಿಂದ ಉದಯವಾದ ಕರ್ನಾಟಕ ವಿಶ್ವ ಪರಂಪರೆಯ ಸಾಲಿನಲ್ಲಿ ಪ್ರಸಿದ್ಧಿ ಪಡೆದ ಕೀರ್ತಿ ನಮ್ಮ ರಾಜ್ಯಕ್ಕಿದೆ. ಅಂತಹ ಪರಂಪರೆಯನ್ನು ಉಳಿಸಲು ಪ್ರಯತ್ನಿಸುತ್ತಿರುವ ಕರ್ನಾಟಕ ನವ ಪಡೆಯ ಸೇವೆ ಶ್ಲಾಘನೀಯ ಎಂದು ಶ್ರೀ ಷ. ಶಿ. ಡಾ. ಮುರುಘರಾಜೇಂದ್ರ ಶ್ರೀಗಳು ಹೇಳಿದರು.ಅವರು ಕರ್ನಾಟಕ ನವ ನಿರ್ಮಾಣ ಪಡೆ ಘಟಕ ಕೋಳಿಗುಡ್ಡ ಹಾಗೂ ಮುಕ್ತ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಿ ಶಾಂತಿ ಕದಡುವವರ ವಿರುದ್ಧ ಹೋರಾಟ ಮಾಡೋಣ. ತನ್ನ ಸಂಪ್ರದಾಯಗಳಿಂದ ಎಲ್ಲ ದೇಶಗಳು ಮೆಚ್ಚುವಂತೆ ಮಾಡಿದೆ ಇದು ನಮ್ಮೆಲ್ಲರ ಹೆಮ್ಮೆಯ ಪ್ರತೀಕ. ಆಧುನಿಕ ಯುಗದಲ್ಲಿ ವಿದೇಶಿ ವ್ಯಾಮೋಹ ಅಧಿಕವಾಗಿದ್ದು, ನಮ್ಮ ನಾಡು ನುಡಿಯ ಸಿರಿಯನ್ನು ಮರೆಯುತಿದ್ದೇವೆ, ನಾವು ಜಾಗೃತರಾಗಬೇಕಾಗಿದೆ, ಮುಂಬರುವ ನಮ್ಮ ಯುವ ಜನಾಂಗಕ್ಕೆ ಕನ್ನಡ ಹಿರಿಮೆ ಭಾಷಾಭಿಮಾನ ಹುಟ್ಟುಹಾಕುವ ಜವಾಬ್ದಾರಿ ನಮ್ಮದಾಗಿದೆ ಕನ್ನಡದ ನೆಲ, ಜಲ, ಭಾಷೆ, ಸಂಸ್ಕೃತಿ ಶ್ರೀಮಂತವಾದದ್ದು. ಕನ್ನಡ ನಾಡು ನುಡಿ ಸಂಸ್ಕೃತಿ, ಭಾಷೆಗೆ ತನ್ನದೆ ಆದ ಸ್ಥಾನಮಾನವಿದೆ. ಪ್ರತಿಯೊಬ್ಬರು ನಾಡು ನುಡಿಯ ಸೇವೆಗೆ ಕಂಕಣಬದ್ಧವಾಗಿರಬೇಕೆಂದು ಆಶೀರ್ವಚನ ನೀಡಿದರು. ನಂತರ ಮಾತನಾಡಿದ ಹಿಡಕಲ್‌ ಕಂಕಣವಾಡಿ ತೋಟದ ಸರಕಾರಿ ಪ್ರಾಥಮಿಕ ಶಾಲೆಯ ಪ್ರಧಾನ ಗುರು ಬಿ. ಎಲ್‌. ಘಂಟಿ ಗ್ರಾಮೀಣ ಭಾಗದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸಿ ಸಾಂಸ್ಕೃತಿಕ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರಚೋಧನೆ ನಿಡಬೇಕು. ಪ್ರಾಚೀನ ಕಾಲದಿಂದಲೂ ಕ್ರೀಡೆಗಳು ಮಾನವನ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ದೈಹಿಕ, ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಅತಿಥಿಗಳಾಗಿ ತಾಲೂಕಾ ದಂಡಾಧಿಕಾರಿ ಕೆ.ಎನ್‌. ರಾಜಶೇಖರ, ಹಾರೂಗೇರಿಯ ಪಿಎಸ್‌ಆಯ್‌ ಎಮ್‌. ಆರ್‌. ತಹಶಿಲ್ದಾರ, ಗ್ರಾಪಂ ಅಧ್ಯಕ್ಷ ಶರಣಪ್ಪಗೌಡ ಪಾಟೀಲ, ತಾಪಂ ಅಧ್ಯಕ್ಷ ರವಿಶಂಕರ ನರಗಟ್ಟಿ, ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಹಣಮಂತ ಹಲಕಿ, ರಾಜು ಶೇಗುಣಸಿ, ಅನೀಲ ಹಲಕಿ, ಯಲ್ಲಾಲಿಂಗ ಹಲಕಿ, ಪಿ. ಆರ್‌. ಗುಡೋಡಗಿ, ವಕೀಲರಾದ ರವಿ ಪಾಟೀಲ, ಸೋಮನಗೌಡ ಪಾಟೀಲ, ಪ್ರೋತ್ಸಾಹಕರಾಗಿ ಗಜಾನನ ಯುವಕರ ಬಳಗದವರು ಹಾಜರಿದ್ದರು.

loading...