ಫಲಾನುಭವಿಗಳಿಗೆ ಹಕ್ಕುಪತ್ರ, ಗ್ಯಾಸ ಸಿಲಿಂಡರ ವಿತರಣೆ

0
56
loading...

ನಿಪ್ಪಾಣಿ : ಶಾಸಕಿ ಶಶಿಕಲಾ ಜೊಲ್ಲೆಯವರ ವಿಶೇಷ ಪ್ರಯತ್ನದಿಂದ ಶೇಂಡೂರ ಹಾಗೂ ಗೊಂದಿಕೊಪ್ಪಿ ಗ್ರಾಮದ ಫಲಾನುಭವಿಗಳಿಗೆ ಮಂಜೂರಾದ ಮನೆ ಹಾಗೂ ಪ್ರಧಾನ ಮಂತ್ರಿ ಉಜ್ವಲ್‌ ಯೋಜನೆಯಡಿಯಲ್ಲಿ ಉಚಿತ ಅಡುಗೆ ಅನಿಲ ಗ್ಯಾಸ ಸಿಲಿಂಡರ್‌ಗಳನ್ನು ಜ್ಯೋತಿಪ್ರಸಾದ ಜೊಲ್ಲೆಯವರ ಹಸ್ತದಿಂದ ವಿತರಿಸಲಾಯಿತು.ನಿಪ್ಪಾಣಿ ಮತಕ್ಷೇತ್ರದ ಶೇಂಡೂರ ಗ್ರಾಮದಲ್ಲಿ 28 ಜನ ಫಲಾನುಭವಿಗಳಿಗೆ ವಸತಿ ಯೋಜನೆಯ ಆದೇಶ ಪತ್ರಗಳನ್ನು ಹಾಗೂ 28 ಉಚಿತ ಗ್ಯಾಸ್‌ ಸಿಲಿಂಡರ್‌, ಗೊಂದಿಕೊಪ್ಪಿ ಗ್ರಾಮದಲ್ಲಿ 18 ಉಚಿತ ಗ್ಯಾಸ್‌ ಸಿಲಿಂಡರ್‌, 22 ಜನ ಫಲಾನುಭವಿಗಳಿಗೆ ವಸತಿ ಯೋಜನೆಯ ಆದೇಶ ಪತ್ರಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರಾದ ಸಿದ್ದು ನರಾಟೆ ಮಾತನಾಡಿ, ಕಳೆದ ನಾಲ್ಕು ವರ್ಷಗಳಲ್ಲಿ ನಿಪ್ಪಾಣಿ ಮತಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಅವಿರತವಾಗಿ ಪ್ರಯತ್ನಿಸುತ್ತಿದ್ದು, ನಿಪ್ಪಾಣಿ ಜನತೆಯ ಪ್ರತಿ ಮನೆ ಮನೆಗೂ ಸರ್ಕಾರದ ಯೋಜನೆಗಳನ್ನು ಒದಗಿಸುತ್ತಿದ್ದಾರೆ. ಅಭಿವೃದ್ಧಿಗಾಗಿ ಅವರಿಗೆ ಸಹಕಾರ ನೀಡಿ ಪ್ರೋತ್ಸಾಹಿಸಬೇಕಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ರಾಧಾಬಾಯಿ ಘೋಡಫೊಂಢೆ, ಉಪಾಧ್ಯಕ್ಷೆ ಸಂಪದಾ ಗಿರಿ, ಗಣಪತಿ ಚೌಗುಲೆ, ನವನಾಥ ಡವರಿ, ಆತ್ಮಾರಾಮ ಚೌಗುಲೆ, ಪ್ರವೀಣ ಗಿರಿ, ಶಿವಾಜಿ ವಾಡೆಕರ ರಾಜೇಂದ್ರ ಪಾಟೀಲ, ಮಧುಕರ ಪಾಟೀಲ, ಸರ್ಜೇರಾವ ಪಾಟೀಲ, ಪ್ರಕಾಶ ಪಾಟೀಲ, ನಾರಾಯಣ ಪಾಟೀಲ, ಜಯಸಿಂಗ ಪಾಟೀಲ, ಆನಂದರಾವ ಪಾಟೀಲ, ವಸಂತ ಭೋಸಲೆ, ಫಲಾನುಭವಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

loading...