ಬಡವರ ಮನೆ ಮನೆಗೂ ಗ್ಯಾಸ್ ಕಿಟ್ ವಿತರಿಸುವ ಗುರಿ

0
15
loading...

ಅಳ್ನಾವರ: ಮನೆಯಲ್ಲಿ ಅಡುಗೆ ಮಾಡುವ ಮಹಿಳೆಯ ಕಣ್ಣಲ್ಲಿ ಯಾವುದೇ ಕಾರಣಕ್ಕೆ ಕಣ್ನೀರು ಬರಬಾರದು ಎಂಬ ಉದ್ದೇಶ ಹೊತ್ತು, ಉಜ್ವಲ ಯೋಜನೆಯಡಿ ಅರ್ಹ ಪಲಾನುಭಿಗಳಿಗೆ ಗ್ಯಾಸ್ ವಿತರಣೆ ನಡೆದಿದೆ. ದೇಶದ ಬಡ ಕುಟುಂಬದ ಮನೆ ಮನೆಗೂ ಗ್ಯಾಸ್ ವಿತರಿಸುವ ಗುರಿ ಇದೆ ಎಂದು ಸಂಸದ್ ಪ್ರಹ್ಲಾದ್ ಜೋಶಿ ಹೇಳಿದರು.
ಇಲ್ಲಿನ ಅನ್ನಪೂರ್ಣ ಗ್ಯಾಸ್ ಎಜೆನ್ಸಿಯವರು ಉಮಾ ಭವನ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ವಿತರಣಾ ಕಾರ್ಯಕ್ರಮದಲ್ಲಿ ಹಕ್ಕು ಪತ್ರ ವಿತರಿಸಿ ಮಾತನಾಡಿದ ಅವರು, ದೇಶದಲ್ಲಿ 60 ವರ್ಷ ಆಡಳಿತ ನಡೆಸಿದ ಕಾಂಗ್ರೇಸ್ ಸರ್ಕಾರ ಇದುವೆರೆಗೆ 6 ಕೋಟಿ ಜನರಿಗೆ ಗ್ಯಾಸ್ ನೀಡಿದೆ. ನರೇಂದ್ರ ಮೋದಿ ನೇತ್ರತ್ವದ ಬಿಜೆಪಿ ಆಡಳಿತ ಕೇವಲ ಮೂರು ವರ್ಷದಲ್ಲಿ 6 ಕೋಟಿ ಜನರಿಗೆ ಗ್ಯಾಸ್ ಹಂಚಿದ್ದು, ಅದರಲ್ಲಿ 3 ಕೋಟಿ ಜನರಿಗೆ ಉಚಿತ ಹಂಚಿಕೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಈಚೆಗೆ ಸುರಿದ ಮಳೆಯಿಂದ ಉಂಟಾದ ರಸ್ತೆಯಲ್ಲಿನ ತೆಗ್ಗುಗಳನ್ನು ಮುಚ್ಚಲು ಆಗದ ಕಾಂಗ್ರೇಸ್ ಸರ್ಕಾರ ಸಾದನಾ ಸಮಾವೇಶ ಮಾಡುತ್ತಿರುವದು ಅರ್ಥಹೀನ ಎಂದ ಸಂಸದರು, ಕೇಂದ್ರ ಸರ್ಕಾರ ಸಾಕಷ್ಟು ಜನಪರ ಯೋಜನೆಗಳನ್ನು ರೂಪಿಸಿದೆ. ಪ್ರದಾನ ಮಂತ್ರಿ ಅವಾಸ ಯೋಜನಯಡಿ ಮನೆ ಕಟ್ಟಲು ಆರ್ಥಿಕ ಸಹಾಯ, ಬಡವರಿಗೆ ಯೋಗ್ಯ ದರದಲ್ಲಿ ಔಷದಿ ದೊರೆಯಲು ಜನ ಔಷದಿ ಕೇಂದ್ರ ಆರಂಭ, ಹೃದಯ ರೋಗಿಗಳಿಗೆ ಕಡಿಮೆ ದರದಲ್ಲಿ ಸ್ಟಂಟ ಅಳವಡಿಕೆ ಮುಂತಾದ ಕಾರ್ಯಗಳು ನಡೆದಿವೆ ಎಂದರು.
ಪ್ರಾಸ್ತಾವಿಕವಾಗಿ ಎಂ.ಸಿ. ಹಿರೇಮಠ ಮಾತನಾಡಿ, ಗಡಿ ಜಿಲ್ಲೆಯ ಈ ಭಾಗದಲ್ಲಿ 156 ಫಲಾನುಭಗಳಿಗೆ ಪ್ರಥಮ ಹಂತವಾಗಿ ಗ್ಯಾಸ್ ವಿತರಣೆ ನಡೆದಿದೆ. ಬರುವ ದಿನಗಳಲ್ಲಿ ಅರ್ಹಪಲಾನುಭವಿಗಳಿಗೆ ಕೂಡಾ ಗ್ಯಾಸ್ ನೀಡಲಾಗುವದು ಎಂದರು.
ಮುಖ್ಯ ಅತಿಥಿ ಕ್ರೇಡೆಲ್ ಮಾಜಿ ಅಧ್ಯಕ್ಷ ಸಿ.ಎಂ. ನಿಂಬಣ್ಣವರ ಮಾತನಾಡಿ, ಈ ಯೋಜನೆಯಡಿ ನೀಡಲಾದ ಗ್ಯಾಸ್ ಸಂಪರ್ಕ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಜನರ ಬದುಕಿನ ಕಷ್ಟ ದೂರವಾಗಿ ಸುಧಾರಣೆ ಕಾಣಲಿ ಎಂದರು.
ಅನ್ನಪೂರ್ಣ ಗ್ಯಾಸ್ ಎಜೆನ್ಸಿಯ ಮಾಲಿಕರಾದ ರತ್ನಾ ಹಿರೇಮಠ, ಮೃತ್ಯುಂಜಯ ಹಿರೇಮಠ, ಸಿ.ಎಂ. ನಿಂಬಣ್ಣವರ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಅಮೂಲ ಗುಂಜೀಕರ,ಲಿಂಗರಾಜ ಮೂಲಿಮನಿ, ಶಂಕರ ಬಸವರೆಡ್ಡಿ, ವಿರೇಶ ಲಿಂಗನಮಠ, ಬಸಯ್ಯಾ ಹಿರೇಮಠ, ಬಸವರಾಜ ಗುಂಡಗೋವಿ, ದಶರಥ ದೇಸಾಯಿ, ಭಾಗ್ಯವತಿ ಕುರುಬರ, ನಾಗರತ್ನಾ ವಾಘಮೋಡೆ, ರಾವಜಿ ಪಟೇಲ, ಬಸವರಾಜ ಕರಡಿಕೊಪ್ಪ ಮುಂತಾದವರು ಉಪಸ್ಥಿತರಿದ್ದರು.

loading...