ಬಡವರ ಸಬಲೀಕರಣ ಬ್ಯಾಂಕಿನ ಮೂಲಧ್ಯೇಯ

0
20
loading...

ಹಾರೂಗೇರಿ: ಸಮಾಜದಲ್ಲಿ ಆರ್ಥಿಕವಾಗಿ ತೀರ ಹಿಂದುಳಿದ ಹಾಗೂ ಬಡವರ ಸಬಲೀಕರಣ ಭಾರತ ಬ್ಯಾಂಕಿನ ಮೂಲ ಆಶಯವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಈರನಗೌಡ ಪಾಟೀಲ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದಲ್ಲಿರುವ ಭಾರತ ಬ್ಯಾಂಕಿನ ಕಾರ್ಯಾಲಯದಲ್ಲಿ ಅಂಧ ಕಲಾವಿದರಿಗೆ ಶೌಚಾಲಯ ನಿರ್ಮಾಣಕ್ಕೆ ಧನಸಹಾಯ ವಿತರಿಸಿ ಮಾತನಾಡಿದರು.ಅಂಧ ಕಲಾವಿದ ಕುಮಾರ ಬಡಿಗೇರ ಮಾತನಾಡಿ, ಭಾರತ ಬ್ಯಾಂಕ್‌ ಅಧ್ಯಕ್ಷ ಈರನಗೌಡ ಪಾಟೀಲರು ಈ ಭಾಗದ ನೊಂದವರ ಧನಿಯಾಗಿದ್ದಾರೆ. ಸಾಮಾಜಿಕ ಕಾರ್ಯಗಳಿಗೆ ಹಣಕಾಸು ನೆರವಿನೊಂದಿಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಕೊಡುಗೆ ನೀಡುತ್ತಿರುವುದು ಶ್ಲಾಘನೀಯವೆಂದರು.ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಪ್ರವೀಣ ಶಹಾ, ನಿರ್ದೇಶಕರಾದ ಪರಗೌಡ ಪಾಟೀಲ, ಸುರೇಶ ಅರಕೇರಿ, ಎನ್‌.ಎಸ್‌ ಇಂಚಲಕರಂಜಿ, ಸುನೀಲ ಪಾಟೀಲ, ಅಲಗೌಡ ಪಾಟೀಲ, ವೀರಭದ್ರ ಕಡಕಭಾವಿ, ಕಲ್ಪನಾ ಸದಲಗಿ, ಜಯಶ್ರೀ ಇಂಚಲಕರಂಜಿ, ಕರೆಪ್ಪ ಪೂಜೇರಿ, ಅಪ್ಪಣ್ಣ ಕುಂಬಾರ, ಮಹಾಂತೇಶ ತಳವಾರ, ವ್ಯವಸ್ಥಾಪಕ ಸುಭಾಷ ಮಧರಖಂಡಿ, ಆರ್‌.ಕೆ ಗುಪ್ತೆ, ಮಹಾನಂದಾ ಸವದಿ, ಜಯಶ್ರೀ ಮಠಪತಿ, ಸುರೇಶ ಸಾರವಾಡ, ಸಹದೇವ ಅರಕೇರಿ, ಪ್ರವೀಣ ಗುರವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...