ಬಡವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

0
23
loading...

ಗುಳೇದಗುಡ್ಡ: ನಾವು ನೆಮ್ಮದಿಯಿಂದ ಬದುಕಲು ನಮ್ಮನ್ನು ರಕ್ಷಣೆ ಮಾಡುವ ಪೋಲಿಸ್‌ ಇಲಾಖೆ, ಗಡಿಕಾಯುವ ಯೋಧರು ಅವರಿಗೆ ನಾವು ಗೌರವ ಕೊಡಬೇಕು. ಧಕ್ಷ ಹಾಗೂ ಪ್ರಾಮಾಣಿಕ ಪೋಲಿಸ್‌ ಸಬ್ಬ್‌ ಇನ್ಸಪೆಕ್ಟರ್‌ ಜಗದೀಶ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅವರ ಕುಟುಂಬವು ಬಡ ವಿದ್ಯಾರ್ಥಿಗಳಿಗೆ ನೋಟ ಪುಸ್ತಕ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾಧ್ಯಕ್ಷ ಮಲ್ಲು ಹುನಗುಂಡಿ ಹೇಳಿದರು.
ಅವರು ಇಲ್ಲಿನ ಸರಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ದಿ.ಜಗದೀಶ ಕುಟುಂಬದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ ಪುಸ್ತಕ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಗದೀಶ ಅವರು ಜೀವದ ಹಂಗನ್ನು ತೊರೆದು ಅಪರಾದಿಗಳನ್ನು ಹಿಡಿಯಲು ಹೋದ ಸಮಯದಲ್ಲಿ ಪ್ರಾಣಕಳೆದುಕೊಂಡರು. ಅವರ ನೆನಪಿನಲ್ಲಿ ಅವರ ಕುಟುಂಬದವರು ಜಗದೀಶ ಅವರ ಹೆಸರು ಸಮಾಜದಲ್ಲಿ ಅಚ್ಚಳಿಯದೇ ಉಳಿಯಬೇಕು ಎಂಬ ಉದ್ದೇಶದಿಂದ ಇಂತಹ ಮಹಾನ್‌ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಉಪಪ್ರಾಚಾರ್ಯ ಎಂ.ಎಂ. ಚಲವಾದಿ ಮಾತನಾಡಿದರು.
ಶಾಲೆಯ ವಿದ್ಯಾರ್ಥಿನೀಯರಿಗೆ ಸುಮಾರು 500 ನೋಟ್‌ ಪುಸ್ತಕಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಮೋಹನ್‌ಕುಮಾರ, ಗಣೇಶ, ದೇವಾಸಿ, ಮಂಜುನಾಥ ರಾಘಾಪುರ, ಶಿವಾನಂದ ಕೋರಂಕಿ, ಕರಿಯಪ್ಪ ಗೌಡರ, ಯಲ್ಲಪ್ಪ ಸಿಂಗಣ್ಣವರ, ದ್ಯಾವಪ್ಪ ಕರಡಿಗುಡ್ಡ, ಹರೀಶ, ಎಸ್‌.ಎ. ಹೂಗಾರ, ಜಿ.ಎಂ. ವಡಗೇರಿ, ಎಸ್‌.ಎಸ್‌. ಪಟ್ಟಣಶೆಟ್ಟಿ ಮತ್ತಿತರರು ಇದ್ದರು.

loading...