ಬಡ ಮಕ್ಕಳು ಜ್ಷಾನವಂತರಾಗಿ ಉನ್ನತ ಹುದ್ದೆ ಅಲಂಕರಿಸಲಿ: ಶೀಲವಂತ

0
24
loading...

ಇಂಡಿ: ಬಡ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸವನ್ನು ಮಾಡಿ ಜ್ಷಾನವಂತರಾಗಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂದು ಬಿಜೆಪಿ ಓಬಿಸಿ ಜಿಲ್ಲಾ ಉಪಾಧ್ಯಕ್ಷ ಶೀಲವಂತ ಉಮರಾಣಿ ಹೇಳಿದರು.
ತಾಲೂಕಿನ ಮಿರಗಿ ಗ್ರಾಮದ ಯಲ್ಲಾಲಿಂಗೇಶ್ವರ ಪ್ರೌಢಶಾಲೆಯಲ್ಲಿ ಮಕ್ಕಲೀಗೆ ಉಚಿತ ನೋಟ್‌ಬುಕ್‌ ಹಾಗೂ ಪೆನ್ನು ವಿತರಣಾ ಕಾರ್ಯಕ್ರಮದಲ್ಲಿ ವಿತರಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಬಡ ಮಕ್ಕಳು ಆರ್ಥಿಕದಿಂದ ಶೈಕ್ಷಣಿಕವಾಗಿ ಕಲಿತು ಮುಂದೆ ಬರಲು ತೊಂದರೆಯನ್ನು ಅನುಭವಿಸುತ್ತಾರೆ. ಆದರೆ ಅಂಥದನ್ನು ಹೋಗಲಾಡಿಸಿ ಅಲ್ಲಿನ ಪಾಲಕರು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮಾಡಿಸಬೇಕು ಎಂದು ವಿನಂತಿಸಿದರು. ಅಲ್ಲದೇ ಇಂದಿನ ಮಕ್ಕಳು ನಾಳಿನ ಉತ್ತಮ ಪ್ರಜೆಯಾಗಲಿದ್ದಾರೆ. ಇದರಿಂದ ಅವರ ಜೀವನ ಸುಂದರವಾಗಲಿದೆ ಎಂದು ತಿಳಿಸಿದ ಅವರು ನಾನು ತಾಲೂಕಿನ ಎಲ್ಲ ಸರಕಾರಿ, ಅನುದಾನಿತ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಲ್ಲಿಯವರೆಗೆ ಸುಮಾರು 65 ಸಾವಿರದಷ್ಟು ನೋಟಬುಕ್‌ ಹಾಗು ಪೆನ್ನು ಉಚಿತವಾಗಿ ನೀಡಿದ್ದೇನೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕ ಡಿ. ಬಿ. ಧನಶೆಟ್ಟಿ ಅಧ್ಯಕ್ಷತೆನ್ನುವಹಿಸಿ ಮಾತನಾಡಿದರು.
ಈ ವೇಳೆ ಬಿಜೆಪಿ ಮುಖಂಡರಾದ ಮೋರೆ, ಪಿಂಟು ಕಲಶೆಟ್ಟಿ, ಮಲ್ಲು ಚಾಕುಂಡಿ, ಮಲ್ಲು ರೋಡಗಿ, ಎಸ್‌,ಬಿ, ಬಿರಾದಾರ, ಹಾಗೂ ಶಾಲಾ ಸಿಬ್ಬಂದಿ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

loading...