ಭಾರತದ ಬೆಂಬಲಕ್ಕೆ ನಿಂತ ಅಮೆರಿಕ

0
29
loading...

ವಾಷಿಂಗ್ಟನ್:- ಒನ್ ಬೆಲ್ಟ್ ಒನ್ ಯೋಜನೆಗೆ ಸಂಬಂಧಿಸಿದಂತೆ ಭಾರತದ ನಿಲುವಿಗೆ ಅಮೆರಿಕ ಬೆಂಬಲ ನೀಡಿದ್ದು, ಒಬೋರ್ ಯೋಜನೆ ವಿವಾದಿತ ಗಡಿ ಪ್ರದೇಶದಲ್ಲಿ ಸಾಗಿದೆ ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಅವರು, ವಿವಾದಿತ ಗಡಿ ಪ್ರದೇಶದಲ್ಲಿ ಚೀನಾ ದೇಶ ಪಾಕಿಸ್ತಾನದೊಂದಿಗೆ ಕೂಡಿ ಯೋಜನೆ ರೂಪಿಸುವ ಮೂಲಕ ತನ್ನ ಸರ್ವಾಧಿಕಾರಿ ಧೋರಣೆಯನ್ನು ಬಿಂಬಿಸುತ್ತಿದೆ ಎಂದು ಹೇಳಿದ್ದಾರೆ.
ಕಳೆದ ವಾರವಷ್ಟೇ ಜೇಮ್ಸ್ ಮ್ಯಾಟಿಸ್ ಭಾರತ ಪ್ರವಾಸ ಮಾಡಿ ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಹಲವು ವಿಚಾರಗಳ ಕುರಿತು ಚರ್ಚಿಸಿದ್ದರು. ಬಳಿಕ ಅಮೆರಿಕಕ್ಕೆ ವಾಪಸ್ ಆಗಿದ್ದ ಮ್ಯಾಟಿಸ್ ಭಾರತದ ವಿರೋಧಕ್ಕೆ ಕಾರಣವಾಗಿರುವ ಚೀನಾ ಮತ್ತು ಪಾಕಿಸ್ತಾನ ಸಹಭಾಗಿತ್ವದ ಒನ್ ಬೆಲ್ಟ್ ಒನ್ ರೋಡ್ ಯೋಜನೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೆನೆಟ್ ಆರ್ಮಿಡ್ ಸರ್ವೀಸಸ್ ಕಮಿಟಿ ಸಭೆಯಲ್ಲಿ ಮಾತನಾಡಿರುವ ಮ್ಯಾಟಿಸ್, ಜಾಗತೀಕರಣಗೊಂಡ ವಿಶ್ವದಲ್ಲಿ ಹಲವು ರಸ್ತೆಗಳು ಹಲವು ಬೆಲ್ಟ್‍ಗಳಿವೆ. ಯಾವುದೋ ಒಂದು ದೇಶ ಒನ್ ಬೆಲ್ ಒನ್ ರೋಡ್ ಎಂದು ಘೋಷಣೆ ಮಾಡುವ ಮೂಲಕ ತನ್ನನ್ನು ತಾನು ಸರ್ವಾಧಿಕಾರಿ ಸ್ಥಾನದಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

loading...