ಭಾರತೀಯ ಮಜ್ದೂರ ಸಂಘದ ಲಾಭ ಪಡೆದುಕೊಳ್ಳಿ: ಕಲಾದಗಿ

0
33
loading...

ರಾಮದುರ್ಗ: ಕಾರ್ಮಿಕರ ಕಲ್ಯಾಣಕ್ಕಾಗಿ ಅವರ ಅಪಾಯ ಕಾಲದಲ್ಲಿ ಅನೂಕೂಲವಾಗಲೆಂದು ಸ್ಥಾಪಿಸಲಾದ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಭಾರತೀಯ ಮಜ್ದೂರ ಸಂಘದ ಲಾಭವನ್ನು ತಾಲೂಕಿನ ಕಾರ್ಮಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲೂಕಾ ಸಂಘದ ಅಧ್ಯಕ್ಷ ಪ್ರಶಾಂತ ಕಲಾದಗಿ ಹೇಳಿದರು.
ತಾಲೂಕಿನ ಸುರೇಬಾನ ಮನಿಹಾಳ ಗ್ರಾಮದಲ್ಲಿ ನಡೆದ ಕಟ್ಟಡ ಮಂಡಳಿಯಿಂದ ಕಾರ್ಮಿಕರಿಗೆ ಕಾನೂನು ಅರಿವು ಕಾರ್ಯಕ್ರಮದ ಸಹಾಧನ ಚಕ್ಕ ವಿತರಿಸಿ ಮಾತನಾಡಿದ ಅವರು, ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಭಾರತೀಯ ಮಜ್ದೂರ ಸಂಘದವರು ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ಅದರಲ್ಲಿ ಮದುವೆ, 50 ಸಾವಿರ, ಕಾರ್ಮಿಕನ ಮಕ್ಕಳಿಗೆ ವ್ಯಾಸಂಗ ವೇತನ 20000 ವ್ಯೆದ್ಯಕೀಯ 2 ಲಕ್ಷ ವ್ಯಚ್ಚ. ಪಿಂಚನಿ, 1000, ಮರಣ 50 ಸಾವಿರ ಅಫಾಯದ ಮರಣವಾದರೆ 3 ಲಕ್ಷ ನೀಡಲಾಗುತ್ತಿದೆ ಆದ್ದರಿಂದ ಕಟ್ಟಡ , ಬಡಿಗತನ, ಸೆಂಟ್ರಿಗ್‌, ಇತರೆ ಸಂಘದಲ್ಲಿ ಹೆಸರು ನೊಂದಾಯಿತ ಸದಸ್ಯ ಕಾರ್ಮಿಕರು ಈ ಸಹಾಧನವನ್ನು ಪಡೆದುಕೊಳ್ಳಬಹುದು. ಸುರೇಬಾನ ಗ್ರಾಮದ ಕುಮಾರ ವಡ್ಡರ, ಗನಪತಿ ವಡ್ಡರಗೆ 1 ಲಕ್ಷ ವಿತರಣೆ, ಮುದಕವಿ ತಿಪ್ಪಣ್ಣ ಬಡಿಗೇರ 50 ಸಾವಿರ ರೂಗಳನ್ನು ನೀಡಲಾಯಿತು. ಕಾಂತೇಶ ರಾಯಬಾಗ, ಬಸವರಾಜ ಕಲ್ಲಾಪೂರ, ಹನಮಂತ ಬೆಳಗಂಟಿ, ಅರ್ಜುನ ಜಾಧವ, ಮಲ್ಲಿಕಾರ್ಜುನ ಸಿಂಧೋಗಿ, ಸಂಜು ಮೇಗಾಡಿ, ಮಹಿಳಾ ಪಧಾಧಿಕಾರಿಗಳಾದ ಹೇಮಾ ಹಂಚಿನಾಳ, ಅಕ್ಕಮ್ಮ ಮಳಲಿ, ವಿಣಾ ಕೋರಿ, ಕಾರ್ಮಿಕ ಮುಂಖಡರಾದ ಕರಿಯಪ್ಪ ವಡ್ಡರ, ಭೀಮಸಿ.ಶಿಂಧೆ, ಪರಶೂರಾಮ ವಡ್ಡರ, ಕೃಷ್ಣಾ ವಡ್ಡರ, ಫಕೀರಪ್ಪ ವಡ್ಡರ, ನಾಗಲಿಂಗ ಬಡಿಗೇರ ಯೋಗಪ್ಪ ಘಟ್ನೂರ ಈಶ್ವರ ಬಡಿಗೇರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

loading...