ಮಟಕಾ,ಜೂಜಾಟ 9 ಜನ ಬಂಧನ

0
30
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಮಟಕಾ ಮತ್ತು ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿಮಾಡಿ ಒಂಬತ್ತು ಜನ ಬಂಧಿಸಿದ್ದಾರೆ.
ಊಡಿಕೇರಿಯ ವೀರಭದ್ರಪ್ಪ ಮಾದರ ಮತ್ತು ನಾಲ್ವರು, ರಾಮದುರ್ಗದ ರಾಮಣ್ಣ ಮಾದರ, ಗುಲಾಬ ಮುಜಾವರ ಗೌಡವಾಡದ ಚಂದ್ರಕಾಂತ ವಡ್ಡರ ಮತ್ತು ಕುಡಚಿಯ ಅಶೋಕ ನಿಕಂ ಬಂಧಿತರು. ಬಂಧಿತರಿಂದ 30,450 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ನಿಪ್ಪಾಣಿ, ಕುಡಚಿ, ಹುಕ್ಕೇರಿ, ರಾಮದುರ್ಗ ಮತ್ತು ದೊಡವಾಡ ಪೊಲೀಸ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

loading...