ಮಟಕಾ, ಜೂಜಾಡುತ್ತಿದ್ದ: 12 ಜನರ ಸೆರೆ

0
13
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯಲ್ಲಿ ಮಟಕಾ, ಜೂಜಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿಮಾಡಿದ ಪೊಲೀಸರು 12 ಜನರನ್ನು ಬಂಧಿಸಿದ್ದಾರೆ.
ಬೈಲಹೊಂಗಲದ ರಫೀಕ ಹುಣಕಟ್ಟಿ, ಜಯರಾಮ ಪೂಜೇರಿ, ಮಾಲದಿನ್ನಿಯ ಅಡಿವೆಪ್ಪ ಭಂಗಿ ಮತ್ತು ಐವರು, ಕುಲಗೋಡದ ಭೀಮಶಿ ಕುರುಬಡಬಾಗ, ಗಿರಿಗಾಂವ ನಾನಪ್ಪ ಕಟ್ಟಿ, ಮಂಟೂರದ ಗಂಗಪ್ಪಾ ಮೇಗಾಡೆ ಬಂಧಿತರು. ಬಂಧಿತರಿಂದ 7,265 ರೂ. ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಕುಲಗೋಡ, ಬೈಲಹೊಂಗಲ ಮತ್ತು ಗೋಕಾಕ ಪೊಲೀಸ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

loading...