ಮದ್ಯ ಮಾರಾಟ: 14 ಜನರ ಬಂಧನ

0
32
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿಮಾಡಿ 14 ಜನರನ್ನು ಬಂಧಿಸಿದ್ದಾರೆ.
ಗುಡಿಕಟ್ಟಿಯ ಫಕೀರಪ್ಪಾ ಮುತ್ತೆನ್ನವರ, ಜಾಂಬೋಟಿಯ ಮನೋಹರ ಸಾಕಳಕರ, ಮನೋಹರ ಗೋವೆಕರ, ಅಮಟೂರದ ಚಿನ್ನವ್ವಾ ಸೋಗಿನಮನಿ, ಮುಗಳಿಹಾಳ ಸುಭಾಶ ಮಾದರ, ನಣದಿ ಅಪ್ಪಾಸಾಬ ಶಶಿಕಾಂತ ತೇಲಿ, ಇಂಗಳಿಯ ಸುಧಾಕರ ಕೋಷ್ಟಿ, ಯರನಾಳದ ಮಯೂರ ಲಕಡೆ, ಭೀವಶಿಯ ವಿಷ್ಣು ಪಾಟೀಲ, ನಾಂಗನೂರದ ಶ್ಯಾಮರಾವ ಮಾನೆ, ಮಲಾಬಾದ ಸಿದ್ದಪ್ಪ ಕೋಳಿ, ಸುಟ್ಟಟ್ಟಿಯ ಮಹಾವೀರ ಮಲಾಜೂರೆ ಮತ್ತು ಹಿಡಕಲ್‍ದ ರವಿ ಪಾರ್ಥನಳ್ಳಿ ಬಂಧಿತರು.
ಬಂಧಿತರಿಂದ 24,469 ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಹಾರೂಗೇರಿ, ಕುಡಚಿ, ಅಥಣಿ, ನಿಪ್ಪಾಣಿ, ಅಂಕಲಿ, ಸದಲಗಾ, ಚಿಕ್ಕೋಡಿ, ಬೈಲಹೊಂಗಲ ಖಾನಾಪುರ ಮತ್ತು ದೊಡವಾಡ ಪೊಲೀಸ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

loading...