ಮನೆಗಳ ಕಳ್ಳತನ ಮಾಡಲು ವಿಫಲಯತ್ನ

ಕಳ್ಳರ ಚಲನವಲನದ ಬಗ್ಗೆ ಶೋಧ ನಡೆಸುತ್ತಿರುವ ಶ್ವಾನದಳ ಹಾಗೂ ಪೊಲೀಸ್ ಸಿಬ್ಬಂದಿ.
loading...

ಕನ್ನಡಮ್ಮ ಸುದ್ದಿ, ಚನ್ನಮ್ಮ ಕಿತ್ತೂರು.
ಪಟ್ಟಣದ ವಿದ್ಯಾಗಿರಿಯಲ್ಲಿರುವ 3 ಮನೆಗಳನ್ನು ಕಳ್ಳತನ ಮಾಡಲು ವಿಫಲಯತ್ನ ನಡೆದಿರುವ ಸಂಗತಿ ಮಂಗಳವಾರ ಬೆಳಕಿಗೆ ಬಂದಿದೆ.
ಸೋಮವಾರ ತಡರಾತ್ರಿ ಈ ವಿಫಲಯತ್ನ ನಡೆದಿದೆ ಎನ್ನಲಾಗಿದ್ದು ಮನೆಯಲ್ಲಿ ಯಾರು ಇಲ್ಲದ ಸಮಯ ಸಾಧಿಸಿದ ಕಳ್ಳರು ಈ ಯತ್ನಕ್ಕೆ ಕೈ ಹಾಕಿರುವದನ್ನು ಕಿತ್ತೂರು ಪಿಎಸ್‍ಐ ಮಲ್ಲಿಕಾರ್ಜುನ ಕುಲಕರ್ಣಿ ಸ್ಪಷ್ಟ ಪಡಿಸಿದ್ದಾರೆ. ಕಳ್ಳರ ಬೇಟೆಗಾಗಿ ಕಿತ್ತೂರು ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಯಿಸಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ.

loading...