ಮೂಡಲಗಿ ತಾಲೂಕು ಮಾಡುವಂತೆ ಮಾಜಿ ಸಿಎಂ ಯಡ್ಡಿಯೂರಪ್ಪಾಗೆ ಮನವಿ

0
24
loading...

ಮೂಡಲಗಿ : ಮೂಡಲಗಿ ತಾಲೂಕಾ ಕೇಂದ್ರವನ್ನು ಸೆ 6ರಂದು ಅಂತಿಮ ಪಟ್ಟಿಯಿಂದ ಕೈಬಿಟ್ಟದ್ದು ಅಕ್ಷಮ್ಯ. ನಾನು ಕೂಡಲೆ ತಾಲೂಕಾ ಕೇಂದ್ರವೆಂದು ಶಿಪಾರಸ್ಸು ಮಾಡಲು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವದಾಗಿ ಮಾಜಿ ಮುಖ್ಯಮಂತ್ರಿ,ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪಾ ಹೇಳಿದರು ಅವರು ಶುಕ್ರವಾರ ಬಾಗಲಕೋಟ ಜಿಲ್ಲೆಯ ಬನಹಟ್ಟಿಯಲ್ಲಿ ಜರುಗಿದ ನೇಕಾರರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಗಮಿಸಿದ ಅವರನ್ನು ನಿರೀಕ್ಷಣಾ ಮಂದಿರದಲ್ಲಿ ಭೆಟ್ಟಿಯಾದ ಮೂಡಲಗಿ ತಾಲೂಕಾ ಹೋರಾಟ ಸಮಿತಿಯ ನಿಯೋಗಕ್ಕೆ ಭರವಸೆ ನೀಡಿದರು.
ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಕೂಡ ಮೂಡಲಗಿ ತಾಲೂಕಾ ಕೇಂದ್ರವೆಂದು ಘೋµಣೆೆಯಾಗಿತ್ತು ಈಗ ಎಕೆ ಹೀಗೆ ಆಗಿದೆ ಎಂಬುದನ್ನು ಪರಿಶೀಲಿಸಿ ಮರು ತಾಲೂಕಾ ಕೇಂದ್ರವೆಂದು ಮಾರ್ಪಡಿಸಲು ನಾನು ಶೀಘ್ರವೇ ಪ್ರಯತ್ನಿಸುವದಾಗಿ ಹೇಳಿದರು ತಾಲೂಕಾ ರಚನೆಗಳ ಆಯೋಗಗಳಲ್ಲಿ ಒಂದಾದ ಪಿ.ಸಿ ಗದ್ದಿಗೌಡರ ಆಯೋಗದ ಅಧ್ಯಕ್ಷ ಸಾಂಸದ ಪಿ.ಸಿ.ಗದ್ದಿಗೌಡರ ಅವರಿಗೂ ಕೂಡ ಈ ಸಮಯದಲ್ಲಿ ಮನವಿ ನೀಡಲಾಯಿತು. ಅವರು, ನಾನು ಕೂಡ ಮೂಡಲಗಿಯು ತಾಲೂಕಾಗಲು ಸೂಕ್ತವಾದ ಪಟ್ಟಣವಾಗಿದೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದೇನೆ ಆದರೆ ಈಗ ಹೇಗೆ ತಡೆಹಿಡಿಯಲಾಗಿದೆ ಎಂದು ತಿಳಿದುಕೊಂಡು ಸಕಾರಕ್ಕೆ ನಮ್ಮ ಅಯೋಗದ ವರದಿ ನೀಡುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಕಾಂಗ್ರೆಸ್‌ ಮುಖಂಡÀ ರಮೇಶ ಉಟಗಿ, ಮಲ್ಲಪ್ಪಾ ನೇಮಗೌಡರ, ಚಂದ್ರಶೇಖರ ಗಾಣಿಗೇರ, ಉಮೇಶ ಬೆಳಕೂಡ, ಬಸವರಾಜ ಗಾಣಿಗೇರ,ಎಸ್‌.ಟಿ.ಮಠಪತಿ ಅಶೋಕ ಗಾಣಿಗೇರ, ಶಿವಾನಂದ ಮುಧೋಳ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

loading...