ಯಾತ್ರಿನಿವಾಸಗಳ ನೂತನ ಕಟ್ಟಡಗಳ ಉದ್ಘಾಟನೆ

0
29
loading...

ಗದಗ, ಅ. 8 : ಗದಗ ಜಿಲ್ಲೆಯ ನರಗುಂದದಲ್ಲಿ ಹೊಸದಾಗಿ ನಿರ್ಮಿಸಲಾದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆಯನ್ನು ರಾಜ್ಯದ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಹಾಗೂ ಶಾಸಕ ಬಿ.ಆರ್. ಯಾವಗಲ್  ನೆರವೇರಿಸಿದರು.  ತದನಂತರ 30 ಲಕ್ಷ ರೂ. ವೆಚ್ಚದಲ್ಲಿ ನರಗುಂದ ಪತ್ರಿವನ ಮಠದ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆ £ರ್ಮಿಸಿದ ನಾಲ್ಕು ಕೋಣೆಗಳ ಯಾತ್ರಿ ನಿವಾಸ ಹಾಗೂ 50ಲಕ್ಷ ರು. ವೆಚ್ಚದಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ £ರ್ಮಿಸಲಾದ ಎಳು ಕೋಣೆಗಳ ಯಾತ್ರಿನಿವಾಸ ಕಟ್ಟಡದ ಉದ್ಘಾಟನೆಯನ್ನು ಅವರು  ನೆರವೇರಿಸಿದರು. ಪತ್ರಿವನದ ಸಮಾರಂಭದ ಸಾ£ಧ್ಯವನ್ನು ಸಿದ್ದವೀರ ಶಿವಯೋಗಿ ಶಿವಾಚಾರ್ಯರು ವಹಿಸಿದ್ದರು. ಗದಗ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಜುಗೌಡ ಕೆಂಚನಗೌಡರ, ನರಗುಂದ ತಾ.ಪಂ. ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ತಾ.ಪಂ. ಸದಸ್ಯ ತಿಮ್ಮರೆಡ್ಡಿ, ನರಗುಂದ ಪುರಸಭೆ ಅಧ್ಯಕ್ಷ ಪ್ರಕಾಶ ಪಟ್ಟಣ ಶೆಟ್ಟಿ, ಪುರಸಭೆ ಸದಸ್ಯರಾದ ಎಸ್.ಆರ್. ಪಾಟೀಲ, ಗಣ್ಯರಾದ  ಎಸ್.ಡಿ. ಕೊಳ್ಳಿಯವರ, ಮಹೇಶ ಬಡಿಗೇರ, ದೇವರೆಡ್ಡಿ ವೆಂಕರೆಡ್ಡಿಯವರ, ಫಕ್ಕಿರಪ್ಪ ಜೋಗನ್ನವರ, ದೇಸಾಯಿಗೌಡ ಪಾಟೀಲ, ಎಸ್.ವಿ. ಬೋನಗೇರಿ  ಸಂದರ್ಭದಲ್ಲಿ ಉಪಸ್ಥಿತರಿದ್ದರು.

loading...