ರಷ್ಯಾ ಪ್ರವಾಸಿಗನಿಗೆ ಸುಷ್ಮಾ ಸ್ವರಾಜ್ ನೆರವು

0
25
loading...

ನವದೆಹಲಿ:- ಕಾಂಚೀಪುರಂ ನಲ್ಲಿ ತನ್ನ ಎಟಿಎಂ ಕಾರ್ಡ್ ಪಿನ್ ಲಾಕ್ ಆದ ಕಾರಣ ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಿದ್ದ ರಷ್ಯಾ ಪ್ರವಾಸಿಗನಿಗೆ ಭಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹಾಯ ಹಸ್ತ ಚಾಚಿದ್ದಾರೆ.
ಇವಾಂಗೆಲಿ ನ್ ನಿಮ್ಮ ದೇಶವು ನಮ್ಮ ಬಹು ಕಾಲದ ಸ್ನೇಹಿತ, ಚೆನ್ನೈನಲ್ಲಿರುವ ನಮ್ಮ ಅಧಿಕಾರಿಗಳು ನಿಮಗೆ ಎಲ್ಲಾ ಸಹಾಯವನ್ನು ಒದಗಿಸುತ್ತಾರೆ ಎಂದು ಸ್ವರಾಜ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಪ್ರವಾಸ ಕೈಗೊಂಡಿದ್ದ 24 ವರ್ಷದ ಇವಾಂಗೆಲಿನ್ ಎಟಿಎಂ ಕಾರ್ಡ್ ಬಳಸಿ ಹಣವನ್ನು ಡ್ರಾ ಮಾಡಲು ವಿಫಲವಾದ ಕಾರಣ ಭಿಕ್ಷಾಟನೆ ಮಾಡಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

loading...