ರಾಮರಾಜ್ಯ ನಿರ್ಮಾಣದಲ್ಲಿ ನಾವೆಲ್ಲರೂ ಶ್ರಮಿಸೋಣ: ಆಸಂಗಿ  

0
18
loading...

ಜಮಖಂಡಿ : ನಗರದ ಇಂದಿರಾ ನಗರದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕರ್ನಾಟಕ ಪ್ರದೇಶ ಕಾಂಗ್ರೆಸ ಸೇವಾದಳ ಸಂಘಟಕರಾದ ಸಿ.ಎಂ ಆಸಂಗಿ ವಕೀಲರು ಗಾಂಧಿಜೀ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಮಾತನಾಡಿದರು. ಅಹಿಂಸಾ ಪರಮೋ ಧರ್ಮ ಎಂಬ ಸಿದ್ದಾಂತದ ಅಡಿಯಲ್ಲಿ ಸತ್ಯಾಗ್ರಹ ಮೂಲಕ ಶಾಂತಿ ಸಂದೇಶ ಸಾರಿದ ಮಹಾತ್ಮಾ ಗಾಂಧಿಜೀ ಅವರ ಜೀವನ ಎಲ್ಲರಿಗೂ ಮಾರ್ಗದರ್ಶನವಾಗಿದ್ದು ನಾವೆಲ್ಲರೂ ದೇಶದ ಹಿತಕ್ಕಾಗಿ ಶ್ರಮಿಸುವುದರ ಮೂಲಕ ಬಾಪುಜಿ ಕಂಡ ಕನಸು ರಾಮರಾಜ್ಯವನ್ನು ಕಟ್ಟುವಲ್ಲಿ ಶ್ರಮಿಸೋಣ ಎಂದರು. ಪ್ರಾರಂಭದಲ್ಲಿ ಸೇವಾದಳದ ಪ್ರಾರ್ಥನೆ ಗೀತೆ ಹಾಡಲಾಯಿತು. ಈ ಸಮಾರಂಭದಲ್ಲಿ ಜಮಖಂಡಿ ತಾಲೂಕಿನ ಕಾಂಗ್ರೆಸ ಸೇವಾದಳದ ಸಂಚಾಲಕಿ ಸಂಜನಾ ಜಮಾದಾರ, ರಾಮ ಸಿಕ್ಕಲಗಾರ, ಅಣ್ಣಪ್ಪ ಸಿಕ್ಕಲಗಾರ, ಬಾಳು ಸಿಕ್ಕಲಗಾರ.ಅಪ್ಪಾಸಿ ಸಿಕ್ಕಲಗಾರ ಮುಂತಾದವರು ಭಾಗವಹಿಸಿದ್ದರು.

loading...