ರಾಮಾಯಣದಂತಹ ಮಹಾಕಾವ್ಯ ಜಗತ್ತಿನಲ್ಲಿ ಮತ್ತೊಂದಿಲ್ಲ

0
20
loading...

ಬೆಟಗೇರಿ: ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಕಾವ್ಯದಲ್ಲಿ ಬರೆದ ಒಂದರೊಳಗೊಂದು ಘಟನೆಗಳನ್ನು ಹೆಣೆಯುತ್ತಾ ಹೊಗುವ ಶೈಲಿ, ರಸ ಪೂರಕವಾಗಿದ್ದ ಶ್ಲೋಕಗಳು ಇದರಲ್ಲಿ ಪಾತ್ರಗಳನ್ನು ಅಚ್ಚುಕಟ್ಟಾಗಿ ರೂಪಿಸಿದ ಪರಿ ಇಂದಿಗೂ ಯಾರಿಗೂ ಸಿದ್ಧಿಸಿಲ್ಲ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಮಾಯಣದಂತಹ ಮಹಾಕಾವ್ಯ ಜಗತ್ತಿನಲ್ಲಿ ಮತ್ತೊಂದಿಲ್ಲ, ಭಾರತ ದೇಶದಲ್ಲಿ ಸೃಷ್ಟಿಗೊಂಡು ವಿಶ್ವ ಮಾನ್ಯವಾಗಿದೆ ಎಂದರು.
ಸ್ಥಳೀಯ ಪ್ರೌಢ ಶಾಲೆಯ ಶಿಕ್ಷಕ ಮಂಜುನಾಥ ಹತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹರ್ಷಿ ವಾಲ್ಮೀಕಿ ವಿಶ್ವಕ್ಕೆ ಕೊಡುಗೆ ನೀಡಿದ ರಾಮಾಯಣ ಮಹಾಕಾವ್ಯ ಎಂದೆಂದಿಗೂ ಪ್ರಸ್ತುತವಾಗುವಂತವು, ಶ್ರೀರಾಮನ ಆದರ್ಶದ ಅದ್ಬುತ್‌ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್‌ ಕವಿಯಾಗಿದ್ದಾರೆಂದರು.
ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ವಾಲ್ಮೀಕಿ ಕುರಿತು ಭಾಷಣ, ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು, ನಂತರ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಲಾಯಿತು.
ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ಕುತುಬು ಮಿರ್ಜಾನಾಯ್ಕ, ಸದಸ್ಯರು, ಶಿಕ್ಷಕ, ಸಿಬ್ಬಂದಿ ವರ್ಗ, ಶಿಕ್ಷಣಪ್ರೇಮಿಗಳು, ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು. ರಮೇಶ ಬುದ್ನಿ ಸ್ವಾಗತಿಸಿದರು. ಮೋಹನ ತುಪ್ಪದ ಕಾರ್ಯಕ್ರಮ ನಿರೂಪಿಸಿದರು. ಎಮ್‌ ಎಸ್‌. ಹಿರೇಮಠ ಕೊನೆಗೆ ವಂದಿಸಿದರು.

loading...