ರಾಷ್ಟ್ರದಮಟ್ಟದ ಅಥ್ಲೆಟಿಕ್ಸಗೆ ಉಗಾರದ ಜ್ಯೋತಿ ಮಾನೆ ಆಯ್ಕೆ

0
28
loading...

ಕಾಗವಾಡ: ಅಥ್ಲೆಟಿಕ್ಸ್‌ 800ಮೀ. ಓಟದ ಸ್ಪರ್ಧೆಯಲ್ಲಿ ಉಗಾರ ಶ್ರೀ ಹರಿ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿನಿ ಜ್ಯೋತಿ ಗಣೇಶ ಮಾನೆ ಕೇವಲ 2.27ನಿಮಿಷದಲ್ಲಿ ಪೂರ್ಣಗೊಳಿಸಿ ಮೂಡಬಿದರಿಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯನ್ನು ಸೋಲಿಸಿ ರಾಜ್ಯ ಮಟ್ಟದ ಪ್ರಥಮ ಸ್ಥಾನಗಿಟ್ಟಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಸದರೀ ವಿದ್ಯಾರ್ಥಿನಿಯನ್ನು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸನ್ಮಾನಿಸಿದರು. ಕಾಗವಾಡದ ರಾಜ್ಯ ನೌಕರ ಸಂಘ ಸಂಸ್ಥೆಯ ಕಾರ್ಯದರ್ಶಿ ಎಸ್‌.ಎಸ್‌.ಶೇಡಶಾಳೆ ಇವರಿಂದ 5000ರೂಗಳ ಚೆಕನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎಸ್‌.ಜೋಡಗಿರೆ ಇವರು ನೀಡಿ ಸನ್ಮಾನಿಸಿದರು. ರಾಷ್ಟ್ರಮಟ್ಟದ ಸ್ಪರ್ಧೆ ಬರುವ ನ.8 , 9 , 10ರಂದು ಮಧ್ಯಪ್ರದೇಶ ರಾಜ್ಯದ ಭೂಪಾಲದಲ್ಲಿ ಜರುಗಲಿವೆ. ಈ ಸ್ಪರ್ಧೆಯಲ್ಲಿ ಜ್ಯೋತಿ ಮಾನೆ ಭಾಗವಹಿಸಲಿದ್ದಾಳೆ. ಇದಕ್ಕೆ ಸಂಸ್ಥೆಯ ವತಿಯಿಂದ ಶುಭಹಾರೈಸಿದರು. ಡಾ.ಶಿರಗಾಂವಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದನ ಶಿರಗಾಂವಕರ , ಕಾರ್ಯದರ್ಶಿ ಎನ್‌.ಎನ್‌.ಸಾಂಗಲಿ, ಶಿಕ್ಷಣ ಸಂಯೋಜಕ ಎಸ್‌.ಎಸ್‌.ಶೇಡಶಾಳೆ , ದೈಹಿಕ ಕ್ರೀಡಾ ಪರೀವೆಕ್ಷಕ ಸಿ.ಎಂ.ಸಾಂಗಲೆ , ಮುಖ್ಯಾಧ್ಯಾಪಕಿ ಡಿ.ಡಿ.ಭೋಸಲೆ , ಆಂಗ್ಲ ವಿಭಾಗದ ಮುಖ್ಯಾಧ್ಯಾಪಕಿ ಕಲ್ಯಾಣಿ ಫಡ್ನಿಸ , ರಮೇಶ ಮಠದ , ಕ್ರೀಡಾ ಶಿಕ್ಷಕ ಆರ.ಎಂ.ಗುರವ , ಶ್ರೀಮತಿ ಎಸ್‌.ವಾಯ್‌.ಸಂಕೋನಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...