ರುದ್ರಭೂಮಿ ಅಭಿವೃದ್ದಿ ಪಡಿಸಬೇಕೆಂದು ಮನವಿ

0
15
loading...

ನರಗುಂದ: ಸ್ಥಳೀಯ ಸೋಮಾಪೂರ ಬಡಾವಣೆಯಲ್ಲಿಯ ರುದ್ರಭೂಮಿ ಅಭಿವೃದ್ದಿ ಪಡಿಸಬೇಕು. ಕಳೆದ ಎರಡು ತಿಂಗಳಿನಿಂದ ಮಳೆ ಸುರಿದ ಪರಿಣಾಮ ರುದ್ರಭೂಮಿ ಸರಿಯಾಗಿಲ್ಲ. ಶವಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ ಎಂದು ಆಗ್ರಹಿಸಿ ಡಿಎಸ್‍ಎಸ್ ಸದಸ್ಯರು ಅ. 25 ರಂದು ಮುಖ್ಯಾಧಿಕಾರಿ ಎನ್.ಎಸ್. ಪೆಂಡಸೆ ಅವರನ್ನು ಬೇಟಿಯಾಗಿ ಮನವಿ ಅರ್ಪಿಸಿದರು.
ಶವ ಸಂಸ್ಕಾರ ಮಾಡಲು ಪ್ರತ್ಯೇಕವಾದ ಕಟ್ಟಡ ನಿರ್ಮಾಣ ಕಾರ್ಯ ನಡಸಬೇಕಾದ ಕೆಲಸವನ್ನು ಕಳೆದ ವರ್ಷದಿಂದ ಮಾಡಿಲ್ಲ. ಹೀಗಾಗಿ ರುದ್ರಭೂಮಿಯಲ್ಲಿ ಪುರಸಭೆಯಿಂದ ಮಾಡುತಿದ್ದ ಈ ಕಟ್ಟಡ ಕಾರ್ಯ ಸ್ಥಗಿತಗೊಳಿಸಲಾಗಿದೆ. ಈ ಕಟ್ಟಡ ಕೆಲಸವನ್ನು ಪೂರ್ಣಗೊಳಿಸಬೇಕು. ಇದಲ್ಲದೇ ರುದ್ರಭೂಮಿ ಅಭಿವೃದ್ದಿಪಡಿಸಿ ಅಲ್ಲಿ ಬೆಳಕಿನ ಸೌಲಭ್ಯಕ್ಕಾಗಿ ಹೆಚ್ಚಿನ ದೀಪಗಳ ಅಳವಡಿಕೆ ಮಾಡಬೇಕು ಹಾಗೂ ರುದ್ರಭೂಮಿಯಲ್ಲಿ ರಸ್ತೆ ಇರದೇ ಬಹಳಷ್ಟು ತೊಂದರೆಯಾಗಿದೆ. ಉತ್ತಮ ರಸ್ತೆ ಮಾಡಬೇಕು, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ವಿವಿಧ ಬೇಡಿಕೆಗಾಗಿ ಆಗ್ರಹಿಸಿ ಡಿಎಸ್‍ಎಸ್ ಸದಸ್ಯರು ಮನವಿ ಅರ್ಪಿಸಿದರು.
ಮುಖ್ಯಾಧಿಕಾರಿ ಎನ್.ಎಸ್. ಪೆಂಡಸೆ ಮನವಿ ಸ್ವೀಕರಿಸಿ ಮಾತನಾಡಿ, ತಮ್ಮ ಮನವಿಯನ್ನು ಸ್ವೀಕರಿಸಲಾಗಿದೆ. ಸೋಮಾಪೂರ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕಾಗಿ ಪ್ರತ್ಯೇಕ ಕಟ್ಟಡ ನಿರ್ಮಿಸಲಾಗಿದೆ. ಅದರ ಕೆಲಸ ಇನ್ನೂ ಶೇ. 20 ರಷ್ಟು ಬಾಖಿ ಉಳಿದುಕೊಂಡಿದೆ ಈ ಕಾರ್ಯನವನ್ನು ಆದಷ್ಟು ಶೀಘ್ರ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಎಸ್‍ಎಸ್ ತಾಲೂಕ ಸಂಚಾಲಕ ಪ್ರಕಾಶ ಕಲ್ಲೇಕನವರ, ಪ್ರಕಾಶ ಹಿರೇಮನಿ, ಕೃಷ್ಣಪ್ಪ ಜೋಗಣ್ಣವರ, ವಿನೋದ ವಡ್ಡರ, ದುರಗಪ್ಪ ಸೋಮಣ್ಣವರ, ಗುರು ಮಾದರ, ಬಸಪ್ಪ ಹೊಣ್ಣನವರ, ಯಲ್ಲಪ್ಪ ಚಲವಾದಿ, ಎಂ.ಎನ್. ಮಾದರ, ಎಸ್.ಡಿ. ಹಿರೇಮನಿ, ಸಿ.ಎಂ. ತುಮ್ಮಿನಕಟ್ಟಿ ಇತರರು ಉಪಸ್ಥಿತರಿದ್ದರು.

loading...