ವಸತಿ ಸೌಲಭ್ಯಕ್ಕೆ ಒತ್ತಾಯಿಸಿ ಸಾರ್ವಜನಿಕರ ಪ್ರತಿಭಟನೆ

0
23
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ಬೆಳಗಾವಿ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ವಡಗಾಂವ, ಶಹಾಪೂರ, ಅನಗೋಳ ಪ್ರದೇಶದಲ್ಲಿ ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ ಜಿ+2 ಮಾದರಿ ಕಟ್ಟಡ ನಿರ್ಮಿಸಿ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಸೋಮವಾರ ನಾಗರಿಕರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದಲ್ಲಿನ ಬಡವರಿಗಾಗಿ 2012ರಲ್ಲಿ ಮಹಾನಗರ ಪಾಲಿಕೆಯಿಂದ ವಾಜಪೇಯಿ ವಸತಿ ನಗರ ಯೋಜನೆಯಡಿ ಅರ್ಜಿ ಆಹ್ವಾನಿಸಿದರು. 2013ರಲ್ಲಿ ವಸತಿ ಯೋಜನೆಗೆ ಅರ್ಜಿ ಸಲಿಸಿದ್ದ ಪ್ರತಿಯೊಬ್ಬರು 50 ಸಾವಿರ ರೂ ಪಾಲಿಕೆಯ ಹೆಸರಿನ ಮೇಲೆ ಸಾಲ ಸೂಮಲ ಮಾಡಿ ಹಣವನ್ನು ತುಂಬಿದ್ದೇವೆ. ತಮ್ಮಗೆಲ್ಲರಿಗೂ ಪಾಲಿಕೆಯ ವತಿಯಿಂದ ಪತ್ರಗಳು ಬಂದಿರುತ್ತವೆ ಆದರೆ ಇದುವರೆಗೂ ಯಾವುದೇ ತರಹದ ವಸತಿ ನಿಲಯಗಳು ಮಂಜೂರಾಗಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

loading...