ವಾಹನ ಸಮೇತ ಅಕ್ರಮ ಮದ್ಯದೊಂದಿಗೆ ಆರೋಪಿಗಳ ಬಂಧನ

0
23
loading...

ದಾಂಡೇಲಿ:- ಜೊಯಿಡಾ ತಾಲೂಕಿನ ಅನಮೋಡ್‌ ತನಿಖಾ ಠಾಣೆಯಲ್ಲಿ ಅಕ್ರಮವಾಗಿ ಗೋವಾ ರಾಜ್ಯದಲ್ಲಿ ತಯಾರಿಸಿದ 67 ಪೆಟ್ಟಿಗೆ ರಾಯಲ್‌ ಸ್ಟ್ಯಾಗ್‌ ವಿಸ್ಕಿ, 60 ಪೆಟ್ಟಿಗೆ ಕೆಸಿನೋ ವಿಕ್ಸಿ, 36 ಪೆಟ್ಟಿಗೆ ರಿಯಲ್‌ ವಿಕ್ಸಿ ಮದ್ಯವನ್ನು ಹಾಗೂ 63 ಪೆಟ್ಟಿಗೆ ಕಿಂಗ್‌ ಫಿಷರ್‌ ಬಿಯರ್‌ನ್ನು ಈಚರ್‌ ಲಾರಿಯಲ್ಲಿ ಸಾಗಿಸುವಾಗ ವಾಹನ ಸಮೇತ 13 ಲಕ್ಷ 78 ಸಾವಿರದ 960 ರೂಗಳ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ರಾಜಸ್ಥಾನದ ವಾಹನ ಚಾಲಕ ದಿನೇಶಕುಮಾರ ಬಿನ್‌ ಖಿನ್ಯರಾಮ ಹಾಗೂ ಕ್ಷೀನರ್‌ ರಾಜಸ್ಥಾನದ ಕಮಲೇಶ ಬಿನ್‌ ಬಾಬೂಲಾಲ ಇವರನ್ನು ಬಂಧಿಸಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ವಾಹನ ಮಾಲಕನ ಶೋಧ ಕಾರ್ಯ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಶಾಮ ಜೋಯಿಸ್‌ ಹಾಗೂ ವಿಶೇಷ ತನಿಖಾ ತಂಡದ ಅಬಕಾರಿ ಅಧಿಕ್ಷಕ ರಮೇಶ ಕುಮಾರ ಎಸ್‌, ಜಿಲ್ಲಾ ತನಿಖಾ ತಂಡದ ಮುಖ್ಯಸ್ಥ ಸಂತೋಷ ಕುಡಾಲಕರ್‌, ಇವರ ಮಾರ್ಗದರ್ಶದನಲ್ಲಿ ಬೆಂಗಳೂರಿನ ರಾಜ್ಯವಿಚಕ್ಷಣ ದಳ ಅಬಕಾರಿ ನಿರೀಕ್ಷಕ ಪ್ರಕಾಶ ಪಾಟೀಲ, ಉಪ ನಿರೀಕ್ಷಕ ಸುಧಾಕರ, ಯಲ್ಲಾಪುರದ ಉಪ ವಿಭಾಗದ ಅಬಕಾರಿ ನಿರೀಕ್ಷಕ ಜಿ.ಎಸ್‌. ನಾಯ್ಕ ಅನಮೋಡದ ಅಬಕಾರಿ ಉಪ ನಿರೀಕ್ಷಕ ಶ್ರೀಕಾಂತ ಬಿ. ಅಸೂದೆ, ದಾಂಡೇಲಿ ವಲಯ ಉಪ ನಿರೀಕ್ಷಕ ಜಿ.ವಿ ವೈದ್ಯ, ಹಾಗೂ ಸಿಬ್ಬಂದಿ ಎಸ್‌.ಬಿ ಬನಸೊಡೆ, ರಾಜು ವಿ. ಭಟ್ಕಳ, ಪುಷ್ಪಾ ಜೊಗಳೆಕರ್‌, ಆನಂದ ಎಚ್‌. ಹರಿಜನ, ಸಂತೋಷ ಸುಬ್ಬಣ್ಣನವರ, ಎಂ.ಬಿ ಪಾವಸ್ಕರ, ವಾಯ್‌.ಎಫ್‌ ಕೊಣ್ಣೂರ, ಅಭಿಷೇಕ ಬೋರಕರ್‌, ಬಸವರಾಜ ಅಲಗೇರಿ ಮೊದಲಾದವರು ದಾಳಿಯಲ್ಲಿ ಭಾಗವಹಿಸಿದ್ದರು.

loading...