ವಿಚಾರ ಸಂಕೀರ್ಣದಲ್ಲಿ ಮಂಡಿಸಲಾಗುವ ವಿಷಯಗಳ ಪೂರ್ವಭಾವಿ ಸಭೆ

ಉತ್ಸವದ ನಿಮಿತ್ತ ಆಯೋಜಿಸಲಾಗುವ ವಿಚಾರ ಸಂಕೀರ್ಣದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿರುವ ಅಧ್ಯಕ್ಷ ಡಾ. ಸಂತೋಷ ಹಾನಗಲ್ ಹಾಗೂ ಇತರರು.
loading...

 

 

 

 

ಕನ್ನಡಮ್ಮ ಸುದ್ದಿ, ಚನ್ನಮ್ಮ ಕಿತ್ತೂರು.
ಉತ್ಸವದ ನಿಮಿತ್ತ ಏರ್ಪಡಿಸಲಾಗುವ ವಿಚಾರ ಸಂಕೀರ್ಣದಲ್ಲಿ ಮಂಡಿಸಲಾಗುವ ವಿಷಯಗಳ ಕುರಿತು ಮಂಗಳವಾರ ಪಟ್ಟಣದಲ್ಲಿ ಉಪ ಸಮಿತಿ ವತಿಯಿಂದ ಪೂರ್ವಭಾವಿ ಸಭೆ ನಡೆಯಿತು.
ಬೆಂಗಳೂರು ಸಂಸ್ಕøತ್ ವಿಶ್ವವಿದ್ಯಾಲಯದ ಉಪನಿರ್ದೇಶಕ ಹಾಗೂ ಕಿತ್ತೂರು ಉತ್ಸವದ ವಿಚಾರ ಸಂಕೀರ್ಣದ ಉಪಸಮಿತಿ ಅಧ್ಯಕ್ಷ ಡಾ. ಸಂತೋಷ ಹಾನಗಲ್ ಮಾತನಾಡಿ, ಉತ್ಸವದಲ್ಲಿ ಆಯೋಜಿಸಲಾಗುವ ವಿಚಾರ ಸಂಕೀರ್ಣದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಹಾಗೂ ಉದ್ಘಾಟನೆಗೆ ಅನೇಕ ಗಣ್ಯರ ಹೆಸರುಗಳು ಕೇಳಿ ಬಂದಿದ್ದು ಈ ಕುರಿತು ಅಧಿಕಾರಿಗಳ ಹಾಗೂ ಗಣ್ಯರ ಜೊತೆ ಚರ್ಚೆ ನಡೆಸಲಾಗುವುದೆಂದರು.
ಉದ್ಘಾಟನೆಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಲ್ಲಿಕಾ ಘಂಟಿ, ಚುಕ್ಕಿ ನಂಜುಂಡ ಸ್ವಾಮೀ, ಪದ್ಮಾಕೇಶವ, ಅಖಿಲಾ ವಿಧ್ಯಾಸಂದ್ರರ ಹೆಸರುಗಳು ಸಮಿತಿಯ ಸದಸ್ಯರಿಂದ ಕೇಳಿಬಂದಿರುವುದಾಗಿ ತಿಳಿಸಿದ ಅವರು, ಮುಕ್ತ ಚರ್ಚೆಯಲ್ಲಿ ಇತಿಹಾಸದ ಬಗ್ಗೆ, ಕಿತ್ತೂರು ಅಭಿವೃದ್ಧಿ ಕುರಿತು, ಮುಂಬರುವ ಪೀಳಿಗೆಗೆ ಇತಿಹಾಸದ ಮನವರಿಕೆಯ ಬಗ್ಗೆ, ಹಾಗೂ ಉತ್ಕಲನದ ಬಗ್ಗೆ, ಹಾಗೂ ಮಹಿಳೆಯರ ಸ್ವತಂತ್ರ್ಯದ ಕುರಿತು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದರು.
ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಿದ ನಂತರ 1824ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ಕಿತ್ತೂರು ಚನ್ನಮ್ಮ ಹಾಗೂ ಪ್ರಸ್ತೂತ ಮಹಿಳೆಯರು, ಉತ್ಕಲನದ ಭಾಗವಾಗಿ ಕಿತ್ತೂರು ನಾಡು, ಕೊನೆಯದಾಗಿ ಮಹಿಳೆ ಮತ್ತು ಸಂವಿಧಾನದ ಕುರಿತು ಚರ್ಚಿಸುವಂತೆ ಉಪ ಸಮಿತಿ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದ್ದಾರೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ಅಡಕಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಯ.ರು.ಪಾಟೀಲ, ಕರ್ನಾಟಕ ಜಾನಪದ ಪರಿಷತ್ತ ತಾಲೂಕಾಧ್ಯಕ್ಷ ಬಸವರಾಜ ಕುಪ್ಪಸಗೌಡ್ರ, ಕಸಾಪ ಕಿತ್ತೂರು ಘಟಕದ ಅಧ್ಯಕ್ಷ ಜಗದೀಶ ಹಾರುಗೊಪ್ಪ, ದುಂಡಪ್ಪ ಇನಾಮದಾರ್, ಶೇಖರ ಕೋಟಿ, ಶಿಕ್ಷಕ ಮಹೇಶ ಚನ್ನಂಗಿ, ಉಮಾದೇವಿ ಬಿಕ್ಕಣ್ಣವರ ಸೇರಿದಂತೆ ಉಪಸಮಿತಿ ಸದಸ್ಯರು ಹಾಗೂ ಇತರೆ ಗಣ್ಯರು ಹಾಜರಿದ್ದರು.

 

loading...