ವಿಜ್ಞಾನ ವಿಷಯದ ಬಗ್ಗೆ ಆಸಕ್ತಿ ಹಾಗೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು

0
19
loading...

ಧಾರವಾಡ- ವಿಜ್ಞಾನ ಎಲ್ಲ ಮಕ್ಕಳಿಗೂ ತಲುಪಬೇಕು, ವಿಜ್ಞಾನ ಅಂದರೆ ಸತ್ಯದ ದರ್ಶನ. ಕಣ್ಣಿಗೆ ಕಾಣುವುದನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ಹೇಳುವಂತ ವಿಜ್ಞಾನ ಕಾರ್ಯಕ್ರಮವಿದು. ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದು , ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು.
ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿವಿಧ ಗ್ರಾಮೀಣ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನದ ಪ್ರಯೋಗಾಧಾರಿತ ತರಗತಿ ಹಾಗೂ ಮಾದರಿ ತಯಾರಿಕೆ ಕಾರ್ಯಾಗಾರದಲ್ಲಿ ಮಾತನಾಡಿದರು. ವೈಜ್ಞಾನಿಕ ಹಿನ್ನಲೆಯ ಪ್ರಾತ್ಯಕ್ಷಿಕೆಗಳು ಮತ್ತು ವಿಜ್ಞಾನದ ಮಾದರಿಗಳು ವಿಜ್ಞಾನವನ್ನು ತಿಳಿದುಕೊಳ್ಳಲು ಸಹಾಯವಾಗುವ ತರಗತಿಗಳು. ವಿಜ್ಞಾನದ ವಿಷಯಗಳನ್ನು ಮಾಡಿ ನೋಡಿ ತಿಳಿದುಕೊಳ್ಳಬೇಕು. ವೈಜ್ಞಾನಿಕ ಮನೋಭಾವ ಹಾಗೂ ವಿಜ್ಞಾನ ವಿಷಯದ ಬಗ್ಗೆ ಆಸಕ್ತಿ ಇರಬೇಕು ಹಾಗೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ತಮಗೆ ಇದ್ದ ಸಮಸ್ಯೆಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಪರಿಹಾರವನ್ನು ಹುಡುಕಿಕೊಳ್ಳುವ ಪ್ರಯತ್ನವನ್ನು ಮಾಡಿಕೊಳ್ಳಬೇಕು. ಜೀವನದಲ್ಲಿ ಒಂದು ಉತ್ತಮವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.
ಕೇಂದ್ರದ ನಿರ್ದೇಶಕ ಡಾ.ಕೆ.ಬಿ.ಗುಡಸಿ ಅಧ್ಯಕ್ಷತೆವಹಿಸಿ ಮಾತನಾಡಿ, ವಿಜ್ಞಾನವು ಪ್ರತಿಯೊಂದು ಹಳ್ಳಿ ಹಳ್ಳಿಗೂ ತಲುಪಬೇಕು. ವಿದ್ಯಾರ್ಥಿಗಳು ನೀವು ತಂದೆ ತಾಯಿಗಷ್ಟೇ ಮಕ್ಕಳಲ್ಲ, ನೀವು ದೇಶದ ಮಕ್ಕಳು. ದೇಶದ ಪ್ರಗತಿ ನಿಮ್ಮ ಕೈಯಲ್ಲಿದೆ. ವಿದ್ಯಾರ್ಥಿಗಳು ಕನಸನ್ನು ಕಾಣಬೇಕು ಮತ್ತು ಆ ಕನಸಿನ ಹುಚ್ಚನ್ನು ಹಚ್ಚಿಕೊಂಡು ಅದರ ಬೆನ್ನು ಹತ್ತಿದಾಗ ಮಾತ್ರ ಆ ಕನಸು ನನಸಾಗುತ್ತದೆ. ವಿಜ್ಞಾನ ವಿಷಯವನ್ನು ಸಿದ್ದಾಂತಕ್ಕಿಂತ ಪ್ರಾಯೋಗಿಕವಾಗಿ ಮಾಡಿ ತೋರಿಸಿದಾಗ ಅದರ ಬಗ್ಗೆ ಹೆಚ್ಚಿನ ಜ್ಞಾನ ಸಿಗುತ್ತದೆ ಎಂದರು.
ವಿಜ್ಞಾನ ಕೇಂದ್ರದ ಶೈಕ್ಷಣಿಕ ಸಹಾಯಕ ಸಿ.ಎಫ್. ಚಂಡೂರ ಸ್ವಾಗತಿಸಿದರು. ಶ್ರೀಮತಿ ಬಿ.ಎಸ್. ಗಾಂವಕರ ನಿರೂಪಿಸಿದರು. ಶ್ರೀಮತಿ ಉಷಾ ಕುಲಕರ್ಣಿ ವಂದಿಸಿದರು.

loading...