ವಿವಿಧ ಧಾರ್ಮಿಕ ಕಾರ್ಯಗಳಿಗೆ ದಿ.4 ರಂದು ಚಾಲನೆ.

ಮಹಾಂತೇಶ ಕರಬಸನ್ನವರ
loading...

 

ಕನ್ನಡಮ್ಮ ಸುದ್ದಿ,ಚನ್ನಮ್ಮ ಕಿತ್ತೂರು.
ಬೈಲಹೊಂಗಲ ತಾಲ್ಲೂಕಿನ ಪಟ್ಟಿಹಾಳ ಕೆ.ಬಿ. ಗ್ರಾಮದ ಬಸವನಗರದಲ್ಲಿ ನೂತನವಾಗಿ ನಿರ್ಮಿಸಿದ ಹಿರೆಮಠದ ಪ್ರವೇಶೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ದಿ.4 ರಂದು ಜರುಗಲಿವೆ.

ಪಟ್ಟಿಹಾಳದ ಸದಾನಂದ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಸ್ಥಾನ ಶುದ್ದಿ, ಭಗಿರಥ ಗಂಗಾಕಲಶ ಆವ್ಹಾನ, ಗೋ ಪೂಜೆ, ವಾಸ್ತು-ಶಾಂತಿ ಹೋವi, ನವಗ್ರಹ ದೇವತಾ ಮಂಡಲ ಪೂಜಾ, ಶ್ರೀ ರುದ್ರಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು, ಶ್ರೀ ಕಾಳಿಕಾಂಬಾದೇವಿ ಗುಡಿಯ ಅಡಿಗಲ್ಲು ಸಮಾರಂಭ ಹಾಗೂ ಪ್ರೌಢ ಶಾಲೆಯ ಹತ್ತಿರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಸತಿ ಹಾಗೂ ಉಚಿತ ಪ್ರಸಾದ ನಿಲಯಕ್ಕೆ ಶಂಕು ಸ್ಥಾಪನೆ ನಡೆಯಲಿದೆ.
ದಿ.5 ರಂದು ಪೌರ್ಣಿಮೆಯಿಂದ ಪ್ರತಿ ಹುಣ್ಣಿವಿಗೆ “ಶಿವಾನುಭವಗೋಷ್ಠಿ” ಕಾರ್ಯಕ್ರಮ ಪ್ರಾರಂಭವಾಗಲಿದೆ. ಎಂದು ನಿಚ್ಚಣಕಿ  ಮಾಹಾಂತೇಶ ಕರಬಸವನ್ನರ ಪ್ರಕಟಣೆಗೆ ತಿಳಿಸಿದ್ದಾರೆ.

 

loading...