ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ

0
17
loading...

ಹಳಿಯಾಳ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕರೆ ನೀಡಿದ ಹಿನ್ನೆಲೆಯಲ್ಲಿ ಸಂಘದ ಹಳಿಯಾಳ ಘಟಕವು ಸಹ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರರಿಗೆ ಸಲ್ಲಿಸಿತು.
ಆರನೇ ವೇತನ ಆಯೋಗ ತನ್ನ ಅಂತಿಮ ವರದಿ ಸಲ್ಲಿಸುವ ಪೂರ್ವದಲ್ಲಿ 1-4-2017 ರಿಂದ ಅನ್ವಯಗೊಳ್ಳುವಂತೆ ಮೂಲ ವೇತನದ ಶೇ.30 ರಷ್ಟು ಮಧ್ಯಂತರ ಪರಿಹಾರವನ್ನು ಸರ್ಕಾರಿ ನೌಕರರಿಗೆ ಮತ್ತು ರಾಜ್ಯ ಸರ್ಕಾರದ ಪಿಂಚಣಿದಾರರಿಗೆ, ಹಾಲಿ ಪಡೆಯುತ್ತಿರುವ ಪಿಂಚಣಿಯ ಶೇ.30 ಮಂಜೂರು ಮಾಡುವದರ ಜೊತೆಗೆ 2017 ನವೆಂಬರ್‌ ತಿಂಗಳ ಅಂತ್ಯದಲ್ಲಿ ಆಯೋಗದ ಅಂತಿಮ ವರದಿಯನ್ನು ಪಡೆದು ಶಿಫಾರಸ್ಸುಗಳನ್ನು ದಿನಾಂಕ: 1-4-2017 ರಿಂದ ಪೂರ್ವಾನ್ವಯವಾಗಿ ಅನುಷ್ಠಾನಗೊಳಿಸುವಂತೆ ಕೋರಿ ಅ.25 ರಂದು ತಹಶೀಲ್ದಾರ ವಿದ್ಯಾಧರ ಗುಳಗುಳಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ರುದ್ರಮೂರ್ತಿ ತಳವಾರ, ಉಪಾಧ್ಯಕ್ಷ ವೆಂಕಟೇಶ ನಾಯಕ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಡಿ. ನಾಯ್ಕ ಹಾಗೂ ಪದಾಧಿಕಾರಿಗಳಾದ ಎಂ.ಬಿ. ಓಶೀಮಠ, ಲೀಲಾ ಶಿಂಧೆ, ಸಾವಿತ್ರಿ ಹಳಿಯಾಳ, ಪ್ರಶಾಂತ ನಾಯಕ, ದರ್ಶನ ನಾಯ್ಕ ಮೊದಲಾದವರಿದ್ದರು.

loading...