ವಿವಿಧ ಬೇಡಿಕೆ ಈಡೇರಿಸುವಂತೆ ಲಾರಿ ಮುಷ್ಕರ

0
14
loading...

ಬೆಂಗಳೂರು:- ಹಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯಾದ್ಯಂತ ಮುಷ್ಕರ ಆರಂಭವಾಗಿದೆ. ಈ ಮುಷ್ಕರದಿಂದ ಸರಕು-ಸಾಗಣಿಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಅವೈಜ್ಞಾನಿಕ ಸರಕು-ಸಾಗಣಿಕೆ ಸೇವೆ ಜಾರಿ ವಿರೋಧಿಸಿ ಮತ್ತು ಡೀಸೆಲ್ ದರ ಕಡಿತಗೊಳಿಸುವುದು, ಟೋಲ್ ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಇಂದು ಮತ್ತು ನಾಳೆ ದೇಶಾದ್ಯಂತ ಲಾರಿ ಮುಷ್ಕರಕ್ಕೆ ಕರೆ ಕೊಡಲಾಗಿದೆ. ರಾಜ್ಯ ಲಾರಿ ಮಾಲೀಕರು ಬೆಂಬಲ ನೀಡಿ ಮುಷ್ಕರಕ್ಕಿಳಿದಿರುವ ಹಿನ್ನೆಲೆಯಲ್ಲಿ ಹೆದ್ದಾರಿಗಳಲ್ಲಿ ಲಾರಿ ಸಂಚಾರ ಸ್ಥಗಿತಗೊಂಡಿದೆ.
ಇಂದು ಬೆಳಗ್ಗೆ 6 ರಿಂದಲೇ ಲಾರಿಗಳ ಓಡಾಟ ವಿರಳವಾಗಿದ್ದು, ಹೆದ್ದಾರಿಗಳಲ್ಲಿ ಮಾತ್ರ ಲಾರಿಗಳ ಓಡಾಟ ಸ್ಥಗಿತಗೊಳಿಸಲಾಗಿದೆ. ಒಂದು ದಿನ ದೇಶಾದ್ಯಂತ ಲಾರಿ ಮುಷ್ಕರ ಮಾಡಿದರೆ ಸುಮಾರು 5 ಸಾವಿರ ಕೋಟಿ ರೂ.ಗಳಷ್ಟು ವಹಿವಾಟು ನಷ್ಟವಾಗುತ್ತದೆ. ಕರ್ನಾಟಕದಲ್ಲಿ 120 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಲಿದೆ. ಸರಕು-ಸಾಗಣೆಯಲ್ಲಿ ವ್ಯತ್ಯಯವಾಗುತ್ತದೆ ಎಂದು ದಕ್ಷಿಣ ಭಾರತ ಮೋಟಾರ್ ಟ್ರಾನ್ಸ್‍ಪೋರ್ಟ್ ಅಸೋಸಿಯೇಷನ್ ಸಂಘಟನೆ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.

loading...