ವಿಷ್ಣು ಸ್ಮಾರಕ ಬೆಂಗಳೂರಿನಲ್ಲಿಯೇ ಆಗಲಿ: ಬ್ಯಾಂಕ್ ಜನಾರ್ದನ

0
35
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:4 ಕೆಲವರು ವಿಷ್ಣು ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಾಣ ಮಾಡುಲು ಸನ್ನದ್ದರಾಗಿದ್ದಾರೆ. ವಿಷ್ಣುವರ್ಧನ ಮೂಲತಃ ಮೈಸೂರಿನವರಾಗಿದ್ದರೂ ಅವರು ಹೆಚ್ಚು ಕಾಲ ಬೆಂಗಳೂರಿನಲ್ಲಿ ಕಳೆದಿದ್ದಾರೆ. ಆದ್ದರಿಂದ ಅವರ ಸ್ಮಾರಕ ಬೆಂಗಳೂರಿನಲ್ಲಿಯೇ ಆಗಬೇಕೆಂಬ ಆಶಯ ತಮ್ಮದಿದೆ ಎಂದು ಹಾಸ್ಯ ನಟ ಬ್ಯಾಂಕ ಜನಾರ್ಧನ ಹೇಳಿದರು.
ಅವರು ಬುಧವಾರ ಕನ್ನಡಮ್ಮ ದಿನಪತ್ರಿಕೆಯೊಂದಿಗೆ ಮಾತನಾಡಿ, ದಿ.ಡಾ. ವಿಷ್ಣವರ್ಧನ ಸ್ಮಾರಕ ನಿರ್ಮಾಣ ಮಾಡುವ ಕುರಿತು ಜಮೀನು ವಿವಾದ ಇದೆ. ಅದು ನ್ಯಾಯಾಲಯದಲ್ಲಿದೆ. ಅದು ಸರಕಾರದ ಜಮೀನು ಆಗಿರಬಹುದು ಆದರೆ ಅದನ್ನು ಬಾಲಕೃಷ್ಣ ಮಕ್ಕಳಿಗೆ ಉಚಿತ ಎಂದು ನೀಡಿದ್ದಾರೆ. ಆ ಜಮೀನನ್ನಾ ಅವರು ಭೂ ಸ್ವಾಧೀನ ಪಡೆಸಿಕೊಂಡು ನ್ಯಾಯಾಲಯದ ಮೊರೆ ಹೊಗಿದ್ದಾರೆ. ಅದು ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೂ ಯಾವ ರೀತಿಯ ಸ್ಮಾರಕವು ಆಗದು. ಆದರೆ ಕೆಲವರು ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಮಾಡಲು ಹೊರಟ್ಟಿದ್ದಾರೆ. ವಿಷ್ಣುವರ್ಧನ ಅವರು ಮೈಸೂರಿನಲ್ಲಿ ಹುಟ್ಟಿದ್ದರೂ ಅವರು ಬೆಂಗಳೂರಿನಲ್ಲಿ ಹೆಚ್ಚು ಕಾಲ ಬಾಳಿದವರು ಅವರ ಸ್ಮಾರಕ ಬೆಂಗಳೂರಿನಲ್ಲಿಯೇ ಆಗಬೇಕೆಂಬುದು ನಮ್ಮ ಆಶಯವಿದೆ. ಆದರೆ ಸರಕಾರ ಮಾತ್ರ ದೃಢ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಸರಕಾರ ವಿಷ್ಣು ಸ್ಮಾರಕಕ್ಕೆ ಪ್ರತಿ ವರ್ಷ 5 ಲಕ್ಷ, 8 ಲಕ್ಷ ಎಂದು ಜಮೆ ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ನೂತನ ಕನ್ನಡ ಚಲಚಿತ್ರಗಳು ರಾಜ್ಯದಲ್ಲಿ ಬಿಡುಗಡೆಯಾದರೇ ಪೈರಸಿ ಮಾಡುವುವವರು ಹೆಚ್ಚಾಗಿದ್ದಾರೆ. ಅಂಥವರ ವಿರುದ್ಧ ರಾಜ್ಯ ಸರಕಾರ ಕನ್ನಡದ ಅಭಿಮಾನದ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದರು.
ರಾಜ್ಯದಲ್ಲಿ ನೂತನ ಚಲನ ಚಿತ್ರ ಬಿಡುಗಡೆಯಾದರೆ ಚಿತ್ರ ವೀಕ್ಷಣೆಗೆ ಬಂದವರು ತಂತ್ರಜ್ಞಾನದ ದುರುಪಯೋಗ ಪಡೆಸಿಕೊಂಡು ಸಾಮಾಜಿಕ ಜಾಲತಾಣ ಹಾಗೂ ಯೂಟ್ಯೂಬ್‍ಗಳಲ್ಲಿ ಹಾಕುತ್ತಿದ್ದಾರೆ. ಇದು ಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರು ಸೇರಿದಂತೆ ಕಲಾವಿದರಿಗೆ ಅಪಾರ ಪ್ರಮಾಣದಲ್ಲಿ ಆರ್ಥಿಕ ನಷ್ಟವಾಗುತ್ತಿದೆ. ಇದಕ್ಕೆ ಸರಕಾರವೇ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರು.
ಈ ಕುರಿತು ಸರಕಾರಕ್ಕೆ ಅನುಮಾನ ಬಂದ ಕೂಡಲೇ ಚಲನಚಿತ್ರ ಮಂಡಳಿಯಿಂದ ಮನವಿ ನೀಡಿದ್ದೇವೆ, ಆದರೂ ಸಿನಿಮಾ ಪೈರಸಿಗೆ ಕಡಿವಾಣ ಬಿಳುತ್ತಿಲ್ಲ. ಸ್ವತಃ ಚಲನಚಿತ್ರ ಮಂಡಳಿಯವರು ಸ್ವತಃ ದಾಳಿ ನಡೆಸಿ ಪೊಲೀಸರಿಗೆ ಒಪ್ಪಿಸಿದ ಪ್ರಸಂಗ ನಡೆದಿದೆ. ಸಿನಿ ಪ್ರಿಯರು ಕನ್ನಡ ಚಿತ್ರಗಳನ್ನು ನಮ್ಮ ಸಿನಿಮಾ ಎಂದು ಭಾವಿಸಿಕೊಳ್ಳಬೇಕು ಅಂದಾಗ ಮಾತ್ರ ಇಂಥ ಹಾವಳಿಯನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಸಿನಿಮಾ ರಂಗದಲ್ಲಿ ಇತ್ತೀಚೆಗೆ ಡಬ್ಬಿಂಗ್ ಎಲ್ಲ ಭಾಷೆಯಲ್ಲಿ ಇದೆ. ಎಲ್ಲ ಭಾಷೆಯಲ್ಲಿಯೂ ಬೆಳೆದಿದೆ. ಇತ್ತೀಚಿನ ದಿನಮಾನಗಳಲ್ಲಿ ಡಬ್ಬಿಂಗ್ ಬೆಳೆಯದಿರುವ ಭಾಷೆಯೊಂದೆ ಕನ್ನಡ ಸಿನಿಮಾಗಳು ಒಂದೆ. ತೆಲಗು, ಹಿಂದಿ ಹಾಗೂ ಮಲಿಯಾಳಂ ಚಿತ್ರ ಎಲ್ಲದರಲ್ಲೂ ಡಬ್ಬಿಂಗ್ ಇದೆ. ಕರ್ನಾಟಕದಲ್ಲಿ ಡಬ್ಬಿಂಗ್ ಬಂದರೆ ನಾಲ್ಕ ಜನ ಅನ್ನ ಊಟಮಾಡುವವರ ಹೊಟ್ಟೆಯ ಮೇಲೆ ಹೊಡೆದ ಹಾಗೆ ಆಗುತ್ತದೆ ಎಂದು ಜನಾರ್ಧನ ಬೇಸರ ವ್ಯಕ್ತಪಡೆಸಿದರು.

loading...