ಶಾಸಕರು ಹಾಗೂ ಶಿಕ್ಷಣಾಧಿಕಾರಿಗಳ ನಿರ್ಲಕ್ಷ್ಯ: ಉಪ್ಪಿನಬೇಟಗೇರಿ

0
18
loading...

ಮುಂಡರಗಿ: ಶಾಲೆಗೆ ಬರುವ ಮಕ್ಕಳಿಗೆ ಮೈದಾನದಲ್ಲಿ ಬರಬೇಕಾದರೆ ಗಲೀಜಿನಿಂದ ಕೂಡಿದ್ದು ಇದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಕೂಡಿಕೊಂಡು ಭಯಾನಕ ರೋಗ ಸೃಷ್ಟಿ ಮಾಡುತ್ತದೆ ಎಂದು ಎಪಿಎಂಸಿ ಸದಸ್ಯ ರವೀಂದ್ರ ಉಪ್ಪಿನಬೆಟಗೇರಿ ಹೇಳಿದರು.
ಅವರು ತಾಲೂಕಿನ ಕೋರ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೇಟಿ ಮಾಡಿ ಮಾತನಾಡಿ ಇಲ್ಲಿನ ಮಕ್ಕಳು ಶಾಲಾ ಮಕ್ಕಳು ಆಟದ ಮೈದಾಲ್ಲಿಯೇ ನೀರು ನಿಂತುಕೊಂಡಿದ್ದು, ಗ್ರಾಮಸ್ಥರು ಕೂಡಾ ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ, ಕಳೆದ 2ತಿಂಗಳಗಳಿಂದ ಈ ಬಗ್ಗೆ ಶಾಸಕರಿಗೆ ಹಾಗೂ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದ್ದರು ನಿರ್ಲಕ್ಷ್ಯತನ ತೋರಿದ್ದಾರೆ ಎಂದು ಹೇಳಿದರು.
ಮಕ್ಕಳು ಶಾಲೆಯ ಆವರಣದಲ್ಲಿ ಆಟ ಆಡುವದು ಸಹಜ ಆದರೆ ನೀರು ನಿಂತು ಗಜೀಲಿನಿಂದ ಕೂಡಿದ್ದು ಆಟ ಆಡುವುದಾದರು ಹೇಗೇ ತಕ್ಷಣ ಸಂಬಂದಪಟ್ಟವರು ಈ ಕೆಲಸವನ್ನು ಮಾಡದೇ ಹೋದಲ್ಲಿ ಮಕ್ಕಳೊಂದಿಗೆ ಕ್ಷೇತ್ರ ಶೀಕ್ಷಣಾಧಿಕಾರಿಗಳ ಕಾರ್ಯಾಲಯದ ಮುಂದೆ ಮಕ್ಕಳ ಸಮೇತ ಧರಣಿ ನಡೆಸಲಾಗುವದು ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಮದರಸಬ ಸಿಂಗನಮಲ್ಲಿ, ಪರಶುರಾಮ್ ಶೀಳ್ಳಿಕ್ಯಾತರ, ಮೌಲಾಸಾಬ ಕೊಂಬಳಿ, ಮೌಲಾಸಾಬ ಹಂಚಿನಾಳ, ಸೇರಿದಂತೆ ಇತರರಿದ್ದರು.

 

loading...