ಶೌಚಾಲಯ ನಿರ್ಮಿಸಿಕೊಳ್ಳದಿದ್ದರೆ ಸದಸ್ಯತ್ವ ರದ್ದು

0
23
loading...

ನಾಲತವಾಡ: ಗ್ರಾಪಂ ಸದಸ್ಯರು ಕಡ್ಡಾಯವಾಗಿ ಶೌಚಾಲಯಗಳನ್ನು ನಿರ್ಮಿಸಿಕೊಂಡಾಗ ಮಾತ್ರ ಇತರರಿಗೆ ಶೌಚಾಲಯಗಳನ್ನು ನಿರ್ಮಿಸುವಂತೆ ಪ್ರೇರೇಪಿಸುವುದು ಸೂಕ್ತ, ಈ ನಿಟ್ಟಿನಲ್ಲಿ ಸದಸ್ಯರೆಲ್ಲರೂ ಮೊದಲು ಇಂದಿನಿಂದಲೇ ಶೌಚಾಲಯಗಳನ್ನು ನಿರ್ಮಿಸಲು ಪ್ರತಿಜ್ಞೆ ಮಾಡಿ ಎಂದು ಪಿಡಿಓ ವೀರೇಶ ಹೂಗಾರ ಗ್ರಾ.ಪಂ ಸದಸ್ಯರಿಗೆ ಒಕ್ಕುರುಲ ಒತ್ತಾಯ ಮಾಡಿದ ಪ್ರಸಂಗ ಸಮೀಪದ ನಾಗರಬೆಟ್ಟ ಗ್ರಾಮದಲ್ಲಿ ಜರುಗಿದ ಗ್ರಾಮ ಸಭೆಯಲ್ಲಿ ನೆಡೆಯಿತು.
ಸಮೀಪದ ನಾಗರಬೆಟ್ಟ ಗ್ರಾಮದ ಮಾರುತೇಶ ದೇವಸ್ಥಾನದಲ್ಲಿ ನೆಡೆದ ಗ್ರಾಮ ಸಭೆಯಲ್ಲಿ ಅವರು ಕಡ್ಡಾಯ ಶೌಚಾಲಯ ನಿರ್ಮಾಣಕ್ಕೆ ಸಂಭಂದಿಸಿದಂತೆ ಹೆಚ್ಚು ಒತ್ತು ಕೊಡುವ ಕುರಿತು ಮಾತನಾಡಿದ ಅವರು ಮೊದಲು ಗ್ರಾ.ಪಂ ಸದಸ್ಯರು ಶೌಚಾಲಯಗಳನ್ನು ನಿರ್ಮಿಸಲೇಬೇಕು ಒಂದು ವೇಳೆ ನಿರ್ಮಿಸಿಕೊಳ್ಳದೇ ದೂರ ಉಳಿದ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಲು ಹೈಕೋರ್ಟ ನಿರ್ದೇಶನವಿದೆ ಎಂದರು.
ನಾಲತವಾಡ ವ್ಯಾಪ್ತಿಯ ಅರಣ್ಯ ಇಲಾಖೆಯ ಅಧಿಕಾರಿಗಳಾದ ತೇಲಿ ಮಾತನಾಡಿ ರೈತರು ತಮ್ಮ ಜಮೀನುಗಳ ಬದುವಿನಲ್ಲಿ ನಾನಾ ಬಗೆಯ ಮರಗಳನ್ನು ನೆಟ್ಟು ಸರಕಾರದ ತಲಾ ಮರಕ್ಕೆ ವಾರ್ಷಿಕ ನೀಡುವ ಪ್ರೋತ್ಸಾಹಧನ ಪಡೆದುಕೊಳ್ಳಬೇಕು ಇಚ್ಚಿಸಿದ ರೈತರು ನಮ್ಮನ್ನು ಸಂಪರ್ಕಿಸಿ ಬೇಡಿಕೆ ಸಲ್ಲಿಸಿದ ನಂತರ ನರ್ಸರಿ ಮೂಲಕ ತಮಗೆ ಮರಗಳನ್ನು ಒದಗಿಸುತ್ತೇವೆ ಎಂದರು. ಕಸಿವಿಸಿಗೊಂಡ ಕಾರ್ಯಕರ್ತೆ: ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹತ್ತರ ಯೋಜನೆಯಾದ ‘ಮಾತೃ ಪೂರ್ಣ’ ಯೋಜನೆ ಕುರಿತು ಮಾತನಾಡುವ ವೇಳೆ ಬೂದಿಹಾಳ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಸರಕಾರದ ‘ಮೂತ್ರ ಪೂರ್ಣ ಯೋಜನೆ’ ಎಂದು ತಪ್ಪಾಗಿ ಮಾತನಾಡುತ್ತಲೇ ಮುಂದುವರೆಸಿದ ಪರಿಣಾಮ ಸಭೆಯಲ್ಲಿ ಪೇಚಿಗೆ ಸಿಲುಕಿದ ಘಟನೆ ನೆಡೆಯಿತು, ಮದ್ಯ ಪ್ರವೇಶಿಸಿದ ಕೆಲವರು ಮೇಡಂ ಅದು ‘ಮೂತ್ರ ಪೂರ್ಣ’ ಅಲ್ಲ ಮಾತೃ ಪೂರ್ಣ ಎಂದು ತಿಳಿ ಹೇಳಿದ ಪ್ರಸಂಗ ಜರುಗಿತು. ಈ ವೇಳೆ ಗ್ರಾ.ಪಂ ಅಧ್ಯಕ್ಷರಾದ ನೀಲಮ್ಮ ಮೂಲಿಮನಿ, ಉಪಾಧ್ಯಕ್ಷೆ ಬಸವ್ವ ವಳಕಲದಿನ್ನಿ, ಪಿಡಿಓ ವೀರೇಶ ಹೂಗಾರ, ಅರಣ್ಯ ಇಲಾಖೆಯ ತೇಲಿ, ಹೆಸ್ಕಾ ಶಾಖಾಧಿಕಾರಿ ಆರ್‌.ಬಿ.ಹಿರೇಮಠ, ಸದಸ್ಯರಾದ ಬಸಪ್ಪ ಬಿರಾದಾರ, ಶಶಿಕಾಂತ ಪಾಟೀಲ, ಸಾಹೇಬಗೌಡ ಪಾಟೀಲ, ನೀಲಮ್ಮ ದೋರನಹಳ್ಳಿ, ಶಾಂತಾ ಹಿರೇಕುರುಬರ, ಬಸಪ್ಪ ಅಡಿಹಾಳ, ಬಸಮ್ಮ ನಾಯ್ಕೊಡಿ ಇದ್ದರು.

loading...