ಸಂಪನ್ನಗೂಂಡ ಉಚಿತ ಕಣ್ಣಿನ ತಪಾಸಣೆ ಶಿಬರ

0
17
loading...

ದಾಂಡೇಲಿ: ನಗರದ ಹಿರಿಯ ನಾಗರಿಕರ ಹಾಗೂ ನಾಗರಿಕರ ಸಮಿತಿಯ ವತಿಯಿಂದ ಸಮಿತಿಯ ಸದಸ್ಯರಿಗೆ ಶನಿವಾರ ನಗರದ ಡಾ. ಶೇಖರ ಆಸ್ಪತ್ರೆಯಲ್ಲಿ ಜರುಗಿದ ಉಚಿತ ಕಣ್ಣಿನ ಹಾಗೂ ಎಲುಬು ಮತ್ತು ಕೀಲು ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ 98 ಸದಸ್ಯರ ತಪಾಸಣೆಯನ್ನು ಮಾಡಲಾಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಡಿದ ಶೇಖರ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ: ಶೇಖರ್‌ ಅವರು ನಗರದಲ್ಲಿ ದಶಕಗಳಿಗಿಂತಲೂ ಹೆಚ್ಚು ವರ್ಷಗಳಿಂದ ಹಿರಿಯ ನಾಗರೀಕರ ಮತ್ತು ನಾಗರಿಕರ ಸಮಿತಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ತನ್ನ ಇರುವಿಕೆ ಮತ್ತು ಬದ್ಧತೆಯನ್ನು ಪ್ರದರ್ಶಿಸುತ್ತಾ ಬಂದಿರುವುದು ಶ್ಲಾಘನೀಯ. ಹಲವಾರು ಸಾಮಾಜಿಕ ಹೋರಟಗಳ ಮೂಲಕ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ನಗರದ ಪ್ರಗತಿಗೆ ಪ್ರಾಮಾಣಿಕ ಸೇವೆಗೈಯುವ ಹಿರಿಯ ನಾಗರಿಕರ ಸಮಿತಿ ಅಭಿನಂದನೆಗೆ ಪಾತ್ರವಾಗಿದೆ ಎಂದರು. ಹಿರಿಯ ನಾರಿಕರ ಸಮಿತಿಯ ಅಧ್ಯಕ್ಷ ವ್ಹಿ.ಎ. ಕೋನಾಪುರಿ, ಕಾರ್ಯದರ್ಶಿ ರಾಮಚಂದ್ರ.ವಿ.ಮಾರ್ಕಂಡೆ, ಉಪಾಧ್ಯಕ್ಷ ಎಂ.ಆರ್‌.ನಾಯಕ, ಸಹ ಕಾರ್ಯದರ್ಶಿ ವಾಸುದೇವ ಜಕಾತಿ, ಪದಾಧಿಕಾರಿಗಳಾದ ಆರ್‌.ಬಿ.ಚಂದಾವರ, ಬಾಬಣ್ಣ ಶ್ರೀವತ್ಸ, ಎಸ್‌.ವೈ.ಹಾದಿಮನಿ, ಪಿ.ವಿ.ಹೆಗಡೆ, ಎಸ್‌.ರುದ್ರಪ್ಪಾ, ಪೌಲ್‌.ಎಸ್‌.ಫರ್ನಾಂಡೀಸ್‌, ರೇಣುಕಾ ಬಂದಂ, ಎಸ್‌.ಎಸ್‌.ಪೂಜಾರ ಮೊದಲಾದವರು ಉಪಸ್ಥಿತರಿದ್ದರು.
ಹುಬ್ಬಳಿಯ ಆಶೋಕಾ ಆಸ್ಪತ್ರೆಯ ಡಾ. ವರ್ಷಾ ಬಂಗಾರ ಶೆಟ್ಟರ ಹಾಗೂ ಡಾ. ಅಶೋಕ ಬಂಗಾರ ಶೆಟ್ಟರ ಈ ಶಿಬಿರವನ್ನು ನಡೆಸಿಕೊಟ್ಟರು. 15 ಶಿಬಿರಾರ್ಥಿಗಳಿಗೆ ಉಚಿತ ಕಣ್ಣಿನ ಪೊರೆ ಚಿಕಿತ್ಸೆ ನೀಡಲಾಗುವುದೆಂದು ಹಾಗೂ ಎಲುಬು ಮತ್ತು ಕೀಲು ತೋಂದರೆ ಉಳ್ಳವರಿಗೆ ಚಿಕಿತ್ಸೆಯ ಬಗ್ಗೆ ಸಲಹೆ ನೀಡಲಾಯಿತು ಎಂದು ಸಂಘಟಕರು ತಿಳಿಸಿದ್ದಾರೆ.

loading...