ಸಮಾಜದ ಸ್ವಸ್ಥ್ಯ ಕಾಪಾಡುವಲ್ಲಿ ಯುವಕರು ಪಣತೊಡಬೇಕು: ಜಾರಕಿಹೊಳಿ

0
26
loading...

ಬೈಲಹೊಂಗಲ: ಹಿಂದೂ ಮುಸ್ಲಿಂ ಏಕತೆಯಿಂದ ಗ್ರಾಮದೇವಿ ಮತ್ತು ಲಕ್ಷ್ಮೀದೇವಿಯ ಉತ್ಸವ ಕಾರ್ಯಕ್ರಮ ಆಯೋಜಿಸಿರುವುದರಿಂದ ಇಂದಿನ ಯುವಕರಲ್ಲಿ ನಾವೆಲ್ಲರೂ ಒಂದು ಎಂಬ ಭಾವನೆ ಬೆಳೆದು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿತ್ತದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಸಮೀಪದ ತಿಗಡಿ ಗ್ರಾಮದಲ್ಲಿ ಆಯೋಜಿಸಿದ್ಧ ದೇವಿಪುರಾಣದ ಮಂಗಲೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಗ್ರಾಮದೇವಿಯ ದರ್ಶನ ಪಡೆದು ಮಾತನಾಡಿದರು. ಸ್ವಚ್ಛ ಮನಸ್ಸಿನಿಂದ ದೇವಿಯ ಮೇಲೆ ಭಕ್ತಿ-ಭಾವದಿಂದ ಹೊಂದಿ ಪೂಜಿಸಿದರೆ ಸಕಲ ಕಷ್ಟಗಳು ನಿವಾರಿಸಿಕೊಳ್ಳಬಹುದು. ದೇವರಲ್ಲಿ ನಂಬಿಕೆ ಇದ್ದರೆ ದುಷ್ಟಕಾರ್ಯಗಳನ್ನು ಮಾಡಲು ಜನ ಹಿಂಜರಿಯುತ್ತಾರೆ ಎಂದರು. ಮಾಜಿ ಜಿಲ್ಲಾಪಂಚಾಯತಿ ಸದಸ್ಯ ಬಾಬಾಸಾಹೇಬ ಪಾಟೀಲ ಮಾತನಾಡಿ ದೇವರ ಮೇಲೆ ನಂಬಿಕೆಯಿಂದ ಬದುಕು ಕಟ್ಟಿಕೊಳ್ಳಿ ಮೂಡನಂಬಿಕೆಯಿಂದ ದೂರವಿರಿ ಎಂದರು. ಗ್ರಾಮದ ವಿರಕ್ತಮಠದ ಶಿವಾನಂದ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಆರ್ಶೀವಚನ ನೀಡಿದರು.
ತಿಗಡಿ ಹಾಗೂ ಕಿತ್ತೂರ ಮತಕ್ಷೇತ್ರದ ಸುತ್ತಮೂತ್ತಲಿನ ಗ್ರಾಮಗಳ ಯುವ ಕಾಂಗ್ರೇಸ್‌ ಮುಖಂಡರು ಸಚಿವರಿಗೆ ಸತ್ಕರಿಸಿ ಗೌರವಿಸಿದರು. ಗ್ರಾ.ಪಂ ಅಧ್ಯಕ್ಷ ಮುನ್ನಾ ಬಹದ್ದೂರಶಿ, ನಾಗೇಶ ಮದನ್ನವರ, ಬಾಬಾ ಹೊಸಮನಿ, ಯಲ್ಲಪ್ಪ ಹಲಕಿ, ಅಡಿವೇಪ್ಪ ಮಾಳಗಿ, ಸಂತೋಷ ಈರಣ್ಣಿ, ಪರಪ್ಪ ಕೋಟಗಿ, ಸೋಮನಿಂಗ ಹುಬ್ಬಳ್ಳಿ, ನಾಗೇಶ ಜಕಾತಿ, ಮಹಾಂತೇಶ ಜಕಾತಿ, ಶಿವಾನಂದ ಪಾಟೀಲ, ಯಲ್ಲಪ್ಪ ನಿಚ್ಚನ್ನಿ, ಸಾಧಿಕ ಬಾಳೇಶಿ ಮತ್ತಿತ್ತರರು ಉಪಸ್ಥಿತರಿದ್ದರು. ದೇಮಪ್ಪ ಮುದೆಕ್ಕನವರ ಸ್ವಾಗತಿಸಿದರು, ಶಂಕರಯ್ಯಾ ಹೀರೆಮಠ ನಿರೂಪಿಸಿದರು, ಮಾರುತಿ ಬಾರಿಗಿಡದ ವಂದಿಸಿದರು.

loading...