ಸರಕಾರದ ಯೋಜನೆಗಳ ಸದುಪಯೋಗವಾಗಲಿ

0
34
loading...

ಸರಕಾರದ ಯೋಜನೆಗಳ ಸದುಪಯೋಗವಾಗಲಿ\ಕನ್ನಡಮ್ಮ ಸುದ್ದಿಚಿಕ್ಕೋಡಿ 01: ಹಳ್ಳಿಯ ಜನರು ಸರಕಾರ ವೃದ್ಧಾಪ್ಯ, ವಿಕಲಚೇತನ ಮತ್ತು ವಿಧವಾ ಪಿಂಚಣಿ ಮಂಜೂರಾತಿ ಸೇರಿದಂತೆ ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳಲು ಗ್ರಾಮ ಲೆಕ್ಕಾಧಿಕಾರಿಗಳನ್ನು ಮತ್ತು ತಹಸೀಲ್ದಾರ ಕಚೇರಿಯಲ್ಲಿರುವ ಪಡಸಾಲೆಗೆ ಸಂಪರ್ಕಿಸಬೇಕು ಎಂದು ಉಪತಹಸೀಲ್ದಾರ ಎಂ.ವಿ.ಬಿರಾದಾರಪಾಟೀಲ ಹೇಳಿದರು.ತಾಲೂಕಿನ ವಡ್ರಾಳ ಗ್ರಾಮದಲ್ಲಿ ಹಮ್ಮಿಕೊಂಡ ಸರಕಾರದ ಸಾಮಾಜಿಕ ಭದ್ರತಾ ಯೋಜನೆಯಡಿ ಮಂಜೂರಾದ ವೃದಾಪ್ಯ, ವಿಕಲಚೇತನ ಮತ್ತು ವಿಧವಾ ವೇತನ ಮಂಜೂರಾತಿ ಆದೇಶ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು. ಇಂದು ಪ್ರತಿಯೊಂದು ಕೆಲಸಕ್ಕೂ ಆಧಾರ ಕಾರ್ಡ ಕಡ್ಡಾಯವಾಗಿದ್ದು, ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರು ಆಧಾರ ಕಾರ್ಡ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.ಕಂದಾಯ ನಿರೀಕ್ಷಕ ಡಿ.ಎಸ್‌.ವಟಗುಡೆ, ಬಸವಪ್ರಭು ಕುಂಡ್ರುಕ್‌ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

loading...