ಸರ್ಕಲ್‌ನಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಆಗ್ರಹ

0
33
loading...

ಯಲ್ಲಾಪುರ:- ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯು ಪ.ಪಂ ಸಭಾಭವನದಲ್ಲಿ ಅಧ್ಯಕ್ಷ ಶಿರೀಷ ಪ್ರಭು ಅಧ್ಯಕ್ಷತೆಯಲ್ಲಿ ನಡೆಯಿತು. ಪಟ್ಟಣದ ಬಸವೇಶ್ವರ ಸರ್ಕಲ್‌ ನಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪಿಸುವುದರಿಂದ ಪಟ್ಟಣದ ಆಕರ್ಷಣೆ ಹೆಚ್ಚಾಗುತ್ತದೆ ಎಂದು ಸದಸ್ಯ ಯೋಗೀಶ ಹೀರೆಮಠ ಸಭೆಯಲ್ಲಿ ಒತ್ತಾಯಿಸಿದರು.
ಪಪಂ ಮುಖ್ಯಾಧಿಕಾರಿ ಮಹೇಂದ್ರತಿಮ್ಮಾನಿಪ್ರತಿಕ್ರಿಯಿಸಿ ಪುತ್ಥಳಿ ಸ್ಥಾಪನೆ ಮಾಡಬಾರದು ಎಂದು ಸುಪ್ರಿಂ ಕೋರ್ಟ ಆದೇಶ ನೀಡುವದರಿಂದಾಗುತ್ತದೆ.ಮತ್ತೆ ಕೆಲವುಮ್ಮೆ ಅಹಿತಕರ ಘಟನೆ ನಡೆದು ಗಲಭೆಗೆ ಕಾರಣವಾಗುತ್ತದೆಂದು ಕಾರಣಕ್ಕೆ ಪರವಾನಿಗೆ ನೀಡದಂತೆ ನಿರ್ದೇಶನ ನೀಡಿದೆ ಎಂದರು .ಅಧ್ಯಕ್ಷ ಶಿರೀಷ ಪ್ರಭು ಮಾತನಾಡಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸೋಣ ಒಪ್ಪಿಗೆ ಸಿಕ್ಕಿದರೆ ಪ್ರತಿಮೆ ಸ್ಥಾಪನೆ ಮಾಡಬಹುದೆಂದರು.
ತರಕಾರಿ ಮಾರುಕಟ್ಟೆ ಭಾಗದಲ್ಲಿ ಅತಿಕ್ರಮಣ ಮಾಡಿಕೊಂಡು ಗೂಡಂಗಡಿವೊಂದು ಅರಂಭವಾಗಿದೆ ಆ ಕುರಿತು ದೂರುಗಳು ಬಂದರೂ ಕ್ರಮ ಕೈಗೊಳ್ಳಲಿಲ್ಲವೇಕೆ ಎಂದು ಸದಸ್ಯ ರವಿಚಂದ್ರ ನಾಯ್ಕ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ದೂರು ಬಂದತಕ್ಷಣ ಅಂಗಡಿ ತೆರವುಗೊಳಿಸಿದ್ದೇನೆ ಮತ್ತೆ ಅಲ್ಲಿಯೇ ಅಂಗಡಿ ತರೆದ ವಿಷಯ ಗೊತ್ತಿ;ಲ್ಲ ಎಂದು ಮುಖ್ಯಾಧಿಕಾರಿ ಸ್ಪಷ್ಟನೆ ನೀಡಲು ಮುಂದಾದಾಗ ಕೆಲಕಾಲ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷರು ಮಧ್ಯ ಪ್ರವೇಶಿಸಿ ಈಗಲೂ ಅಲ್ಲಿ ಅಂಗಡಿ ಇದ್ದರೆ ತಕ್ಷಣ ಅದನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸುವದರ ಮೂಲಕ ಚರ್ಚೆಗೆ ತೆರೆ ಎಳೆದರು. ದೇವಿ ದೇವಸ್ಥಾನ ರಸ್ತೆ ಕಾಂಕ್ರೀಟಿರಣ ಕಾಮಗಾರಿಯನ್ನು ಡಿಸೆಂಬರ ಒಳಗೆ ಮುಗಿಸಬೇಕಾಗಿದ್ದು ಕಾಮಗಾರಿ ಸಮರ್ಪಕವಾಗಿ ನಡೆಸಬೇಕು ಪೈಪಲೈನ್‌, ದೂರವಾಣಿ ಕೇಬಲ್‌ ದುರಸ್ಥಿ ಮುಂತಾದ ಕಾರಣಗಳನ್ನು ನೀಡಿ ಪದೇ ಪದೇ ರಸ್ತೆ ಒಡೆಯುವ ಪರಿಸ್ಥಿತಿ ಬಾರದಂತೆ ಮುನ್ನಚ್ಚರಿಕೆವಹಿಸಿಯೇ ಕಾಮಗಾರಿ ನಡೆಸಬೇಕೆಂದು ಪ್ರತಿಪಕ್ಷದ ಸದಸ್ಯರು ಅಗ್ರಹಿಸಿದರು.

loading...