ಸರ್ಕಾರ ನಾಡದ್ರೋಹಿಗಳನ್ನು ಪೋಷಿಸುತ್ತಿದೆ: ಗಡಾದ 

0
22
loading...

ಮೂಡಲಗಿ : ಕಳೆದ ವರ್ಷದ ರಾಜ್ಯೋತ್ಸವದ ದಿನದಂದು ಕರಾಳ ದಿನ ಆಚರಣೆ ಮಾಡಿದ್ದ ನಾಡದ್ರೋಹಿ ಎಂಎಎಸ್‌ ಜನಪ್ರತಿನಿಧಿಗಳು ಹಾಗೂ ಮುಖಂಡರುಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ಅಂದಿನ ಜಿಲ್ಲಾಧಿಕಾರಿಗಳು ಸರಕಾರಕ್ಕೆ ವರದಿಯನ್ನು ನೀಡಿ ಒಂದು ವರ್ಷ ಗತಿಸಿದ್ದರು ಇಲ್ಲಿಯವರೆಗೂ ಸರಕಾರವು  ನಾಡದ್ರೋಹಿಗಳ ಮೇಲೆ ಯಾವುದೇ ರೀತಿ ಕ್ರಮ ಕೈಗೊಳ್ಳದೇ ನಾಡದ್ರೋಹಿಗಳ ರಕ್ಷಣೆಗೆ ಮುಂದಾಗಿದೆ.  ಸರಕಾರದ ಕ್ರಮವನ್ನು ನೋಡಿದರೆ  ಸರಕಾರವು ನಿಜವಾಗಿಯೂ ಕನ್ನಡಪರ ಸರ್ಕಾರವೇ ಎಂಬ ಅನುಮಾನ ಮೂಡುತ್ತಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅಕ್ರೋಶ ವ್ಯಕ್ತಪಡಿಸಿದ್ದಾರೆ.  ಅವರು ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯದ ಕುರಿತು ನಗರಾಭಿವೃದ್ಧಿ ಇಲಾಖೆಯಲ್ಲಿ ಸೃಷ್ಟಿಸಲಾದ ಕಡತ ಜಿಲ್ಲಾಧಿಕಾರಿಗಳ ವರದಿ ಆಧರಿಸಿ ಸರಕಾರವು ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿಯನ್ನು ನೀಡುವಂತೆ ಕಳೆದ ವರ್ಷ ಡಿ. 28 ರಂದು ವಿನಂತಿಸಲಾಯಿತು. ಆದರೆ ಇದಕ್ಕೆ ಬೇಜವಾಬ್ದಾರಿ ಹೇಳಿಕೆ ನೀಡಿದ ಸರಕಾರ ಈ ಕಡತವು ಚಲನೆಯಲ್ಲಿದ್ದು ಮಾಹಿತಿಯು ಭೌತಿಕವಾಗಿ ಲಭ್ಯವಿರುವುದಿಲ್ಲವೆಂದು ಲಿಖಿತವಾಗಿ ತಿಳಿಸಿದೆ ಎಂದರು.  ಸರಕಾರವು  ಎಂ.ಇ.ಎಸ್‌ ಮತಕ್ಕಾಗಿ ನಾಡದ್ರೋಹಿಗಳ ರಕ್ಷಣೆಗೆ ನಿಂತಿರುವುದು ಕಂಡುಬರುತಿದೆ. ಕಳೆದ ವರ್ಷವೇ ಸರ್ಕಾರ ನಾಡದ್ರೋಹಿಗಳ ವಿರುದ್ದ ಕಠಿಣ ಕ್ರಮ ಕೈಗೊಂಡಿದ್ದರೆ ಈ ಬಾರಿ ಕರಾಳದಿನದ ಪ್ರಮೇಯವೇ ಎದುರಾಗುತ್ತಿರಲಿಲ್ಲ. ಈ ಸರಕಾರದಲ್ಲಿರುವ ಸಚಿವರುಗಳು ಹಾಗೂ ಬೆಳಗಾವಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ನಿಜವಾಗಿಯು ಕನ್ನಡಿಗರ ಪರವಾಗಿದ್ದಲ್ಲಿ ಕೂಡಲೇ ಈ ವರದಿಯು ಪರಿಶೀಲಿಸಿ ನಾಡದ್ರೋಹಿಗಳ ಮೇಲೆ ಕ್ರಮಕೈಗೊಳ್ಳುವಂತೆ ಸರಕಾರದ ಮೇಲೆ ಒತ್ತಡ ಹೇರಬೇಕು ಬರುವ ರಾಜ್ಯೋತ್ಸವದ ದಿವಸ ಕರಾಳ ದಿನ ಆಚರಣೆಗೆ ಸರಕಾರ ಅನುಮತಿ ನೀಡದಂತೆ ನೋಡಿಕೊಳ್ಳಬೇಕು. ಸರಕಾರ ಜನಪ್ರತಿನಿಧಿಗಳು ಒಂದು ವೇಳೆ ಈ ವಿಷಯದ ಬಗ್ಗೆ ಮೌನವಹಿಸಿದ್ದಲ್ಲಿ ಬರುವ ಚುನಾವಣೆ ಸಮಯದಲ್ಲಿ ಕನ್ನಡಿಗರು ಇಡೀ ಸರಕಾರದ ವಿರುದ್ಧ ಸಮರ ಸಾರಬಹುದಾಗಿದೆ ಎಂದು ಎಚ್ಚರಿಸಿದರು.

loading...