ಸಹಾಯಧನದ ಚೆಕ್ ವಿತರಣೆ

0
34
loading...

ಗೋಕಾಕ: ರೈತರು ಕೃಷಿಯ ಜೊತೆಗೆ ಉಪಕಸಬುಗಳಾದ ಹೈನುಗಾರಿಕೆ, ರೇಷ್ಮೆ ಹುಳ ಸಾಕಾಣಿಕೆ ಮಾಡುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕೆಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಸೋಮವಾರದಂದು ತಮ್ಮ ಕಾರ್ಯಾಲಯದಲ್ಲಿ ರೇಷ್ಮೆ ಇಲಾಖೆಯಿಂದ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಹುಳ ಸಾಕಾಣಿಕೆಗಾಗಿ ಕಡಿಮೆ ಸೆಡ್ ನಿರ್ಮಿಸಲು ಸರಕಾರದಿಂದ ನೀಡಲಾದ ಸಹಾಯಧನದ ಚೆಕ್‍ಗಳನ್ನು ವಿತರಿಸಿ ಮಾತನಾಡುತ್ತಿದ್ದರು.
ರೈತರ ಆರ್ಥಿಕ ಅಭಿವೃದ್ಧಿಗಾಗಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಸಹಾಯಧನ ಹಾಗೂ ಸಬ್‍ಸಿಡಿ ನೀಡುತ್ತಿದ್ದು ಅವುಗಳನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ರಮೇಶ ಜಾರಕಿಹೊಳಿ ಕರೆ ನೀಡಿದರು.
ತಾಲೂಕಿನ ತಿಗಡಿ ಗ್ರಾಮದ 9 ರೇಷ್ಮೆ ಬೆಳೆಗಾರರಿಗೆ ತಲಾ 21,000ರೂ. ಸಹಾಯಧನದ ಚೆಕ್‍ಗಳನ್ನು ಸಚಿವರು ವಿತರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯರಾದ ಟಿ.ಆರ್.ಕಾಗಲ್ ಹಾಗೂ ಮಡ್ಡೆಪ್ಪ ತೋಳಿನವರ, ರೇಷ್ಮೆ ಇಲಾಖೆ ವಿಸ್ತರಣಾ ಅಧಿಕಾರಿ ಆರ್.ಡಿ.ಬಡಿಗೇರ ಸೇರಿದಂತೆ ಅನೇಕರು ಇದ್ದರು.

loading...