ಸಾಧನಾ ಸಮಾವೇಶಕ್ಕೆ 9 ಸಾವಿರ ಫಲಾನುಭವಿಗಳು:ಡಿಸಿ

0
22
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ಧಾರವಾಡದಲ್ಲಿ ಸೆ. 23 ರಂದು ನಡೆಯುವ ಬೆಳಗಾವಿ ವಿಭಾಗ ಮಟ್ಟದ ಸಾಧನಾ ಸಮಾವೇಶಕ್ಕೆ 9 ಸಾವಿರ ಫಲಾನುಭವಿಗಳನ್ನು ಕರೆದುಕೊಂಡು ಹೋಗಲು ಜಿಲ್ಲಾಢಳಿತ ನಿರ್ದರಿಸಿದೆ. ಸಮಾವೇಶಕ್ಕೆ ಸಂಬಂಧಿಸಿದ ಇಲಾಖೆಯವರು ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವಂತೆ ಜಿಲ್ಲಾಧಿಕಾರಿ ಜಿಯಾವುಲ್ಲಾ.ಎಸ್. ಸೂಚಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾ ಭವನದಲ್ಲಿ ಜರುಗಿದ ಸಾಧನಾ ಸಮಾವೇಶದ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಿಂದ 180 ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಸುಮಾರು 9100 ವಿವಿಧ ಇಲಾಖೆಗಳ ಫಲಾನುಭವಿಗಳು ಸಾಧನಾ ಸಮಾವೇಶದಲ್ಲಿ ಭಾಗವಹಿಸಲ್ಲಿದ್ದಾರೆ ಎಂದರು.
ಬಸ್‍ಗಳಲ್ಲಿ ತೆರಳುವ ಫಲಾನುಭವಿಗಳಿಗೆ ಊಟ,ಉಪಚಾರದಲ್ಲಿ ಅವ್ಯವಸ್ಥೆಯಾಗದಂತೆ ಸರಿಯಾಗಿ ಕಲ್ಪಿಸಬೇಕು. ಪ್ರತಿಯೊಂದು ಬಸ್‍ಗಳಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ನರ್ಸ್ ಅವರನ್ನು ನೇಮಕ ಮಾಡಬೇಕು ಎಂದು ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಡಿಸಿ ಜಿಯಾವುಲ್ಲಾ ಸೂಚಿಸಿದರು.
ಜಿಪಂ ಸಿಇಒ ರಾಮಚಂದ್ರನ್.ಆರ್. ಅಪರ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

loading...