ಸುಧಾರಣೆಯತ್ತ ಪುರಸಭೆಯ ಸಿಹಿ-ಕಹಿ ಕಾರ್ಯ

0
27
loading...

ಅಥಣಿ: ಸದ್ಯದ ಪರಿಸ್ಥಿತಿಯಲ್ಲಿ ಕಳೆದ 30 ವರ್ಷಗಳಿಂದ, ಅಥಣಿ ಪಟ್ಟಣದಲ್ಲಿ ಉಪ ನಗರಗಳು ನಿರ್ಮಾಣಗೊಂಡಿವೆ. ಈ ಉಪ ನಗರಗಳಿಂದ ಪುರಸಭೆಗೆ ಹೆಚ್ಚಿನ ಆದಾಯವೆಂದರೆ ತಪ್ಪಿಲ್ಲ. ಆದರೆ ಮನೆ ನಿರ್ಮಾಣಾವಾಗುವಾಗ ಡೆವ್ಹಲಪ್‌ಮೆಂಟ್‌ ಅಂತ ಕರವನ್ನು (ಟಾಕ್ಸ) ತುಂಬಿಕೊಂಡೆ ಪರವಾಣಿಗೆ ನೀಡುತ್ತಾರೆ. ಆದರೆ ತಡವಾಗಿ ಡೆವ್ಹಲ್ಪಮೆಂಟ್‌ ಮಾಡಿದರೂ ಅಲ್ಲಿಯ ಸ್ವಚ್ಛತೆ, ಇತರ ಸೌಲಭ್ಯಗಳನ್ನು ಒದಗಿಸುವಲ್ಲಿ ಅನಾತ್ಸೆ ತಾಳುತ್ತಾರೆ ಎಂಬ ಮಾತು ಪ್ರಚಲಿತವಿದೆ. ಒಮ್ಮೆ ನಿರ್ಮಾಣವಾದ ಗಟಾರು ,ಚರಂಡಿಕಡೆ ಗಮನಹರಿಸುವದಿಲ್ಲ. ಉದಾ; ವಾರ್ಡ 22ರ ನಾಲ್ಕನೆಯ ಅಡ್ಡರಸ್ತೆಯಲ್ಲಿ ಸುಮಾರು 2 ವರ್ಷಗಳಿಂದ ಗಟಾರ ಕಟ್ಟಿ,ಒಡೆದ್ಹೋಗಿ ಅನೇಕ ಅಪಘಾತಗಳಾದರೂ ಮತ್ತು ಇಲ್ಲಿಯ ಜನ ಮನವಿ ಸಲ್ಲಿಸಿದರೂ, ಮೌಖಿಕವಾಗಿ ಹೇಳಿದರು,ಕಿವಿ ಕೇಳದಂತ ವರ್ತಿಸುವ ಇವರ ವರ್ತನೆಗೆ, ಈ ವಾರ್ಡಿನ ಜನ ಅಸಮಾಧಾನ ಗೊಂಡಿದ್ದಾರೆ. ನಾಟಕಿಯವಾಗಿ ಪುರಸಭೆ ಸದಸ್ಯರು, ರೋಡ ಶೋ ಮಾಡಿದ್ದನ್ನು ಕಟುವಾಗಿ ಟಿಕಿಸಿದುಂಟು. ಇಲ್ಲಿ ರಾಜಕೀಯ ಕೇಳಿಬರುತ್ತಿದೆ. ಪುರಸಭೇಯ ನ್ಯೂನ್ಯತೆಗೆ ಲೆಕ್ಕಿಲ್ಲ ಆದರೂ ಅಲ್ಲಿ ಇಲ್ಲಿ ಸ್ವಲ್ಪ ಸುಧಾರಣೆಯ ಕಾರ್ಯ ಕಂಡು ಬರುತ್ತಿವೆ. ಉಪನಗರಗಳಲ್ಲಿಯ ವಿಳಾಸಕ್ಕೆ ಇಲ್ಲಿಯ ವರೆಗೆ ಯಾವುದು ಆಧಾರವಿರಲಿಲ್ಲ. ಹಾಗೂ ಗುರುತು ಸಹ ಸಿಗುತ್ತಿರಲಿಲ್ಲ ,ಈಗ ಸಮಸ್ಯಗೆ ಪರಿಹಾರವೆಂದು ಪುರಸಭೆಯವರು ದೊಡ್ಡ ಮನಸು ಮಾಡಿ , ವಾರ್ಡಗಳ ಸಂಖ್ಯೆ, ರಸ್ತೆಗಳ ಸಂಖ್ಯೆ, ಮತ್ತು ಆ ವಾರ್ಡಿನ ಸದಸ್ಯರ ಹೆಸರು, ಮೇಲಾಗಿ ಶಾಸಕರ ಹೆಸರನ್ನು ಸಹ ಹಾಕಿ .ಫಲಕಗಳನ್ನು ನೆಟ್ಟಿದ್ದು ಜನರಿಗೆ,ಮತ್ತು ಪೋಸ್ಟಮನ್‌ರಿಗೆ, ಹಾಗೂ ದೂರಿನಿಂದ ಬರುವ ಜನರಿಗೆ ಬಹಳ ಅನೂಕುಲವಾಗಿದೆ. ಈ ಕೆಲಸಕ್ಕೆ ಮಾತ್ರ ಜನರು ಅಭಿನಂದಿಸುತ್ತಿದ್ದಾರೆ.

loading...