ಸುಪ್ರೀಂ ಆದೇಶ ಖಂಡಿಸಿದ ಬಾಬಾ ರಾಮ್ ದೇವ್

0
17
loading...

ನವದೆಹಲಿ:- ರಾಜಧಾನಿ ದೆಹಲಿಯಲ್ಲಿ ದೀಪಾವಳಿ ಆಚರಣೆ ವೇಳೆ ಸಿಡಿಮದ್ದು ಮಾರಾಟವನ್ನು ಸುಪ್ರೀಂಕೋರ್ಟ್ ನಿಷೇಧಿಸಿರುವುದನ್ನು ಯೋಗಗುರು ಬಾಬಾ ರಾಮ್ ದೇವ್ ಅವರು ಖಂಡಿಸಿದ್ದಾರೆ.
ಪಟಾಕಿ ನಿಷೇಧ ಆದೇಶ ಕುರಿತಂತೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ದೇಶದಲ್ಲಿ ಇಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಲಾಗುತ್ತಿದೆ. ಹಿಂದುಗಳನ್ನು ಗುರಿ ಮಾಡಲಾಗುತ್ತಿದ್ದು, ಹಿಂದೂಗಳ ಹಬ್ಬಗಳನ್ನು ರಡಾರ್ ಗಳನ್ನು ತರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಪ್ರತಿಯೊಂದಕ್ಕೂ ಕಾನೂನಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳುವುದು ಸರಿಯಿದೆಯೇ ನಾನು ಕೂಡ ಶಾಲೆಗಳು, ವಿಶ್ವವಿದ್ಯಾಲಯಗಳನ್ನು ನಡೆಸುತ್ತಿದ್ದೇನೆ. ಕೈಯಲ್ಲಿ ಸುಡುವ ಹಾಗೂ ಕಡಿಮೆ ಶಬ್ದವುಳ್ಳ ಪಟಾಕಿಗಳನ್ನು ಹಚ್ಚಲು ನಾವು ಅನುಮತಿ ನೀಡಿದ್ದೇವೆ. ಅತೀ ಹೆಚ್ಚು ಶಬ್ಧ ಮಾಡುವ ಪಟಾಕಿಗಳಿಗೆ ನಾವು ಬೆಂಬಲಿಸುವುದಿಲ್ಲ. ದೊಡ್ಡ ದೊಡ್ಡ ಪಟಾಕಿಗಳ ಮೇಲೆ ನಿಷೇಧ ಹೇರಬೇಕಿದೆ ಎಂದಿದ್ದಾರೆ.

loading...