ಸ್ವಂತ ಉದ್ದಿಮೆ ಪ್ರಾರಂಭಿಸಿ ಇತರರಿಗೆ ಉದ್ಯೋಗ ನೀಡಿ: ಮಾವಿನಕುರೆ

0
40
loading...

ಮೂಡಲಗಿ: ಈಗಿನ ಸ್ಫರ್ಧಾತ್ಮಕ ಜಗತ್ತಿನಲ್ಲಿ ವಿಪುಲ ಅವಕಾಶಗಳು ಇವೆ ಅದರಲ್ಲಿಯೂ ಸೌಂದರ್ಯ ಮತ್ತು ಆರೋಗ್ಯ ಕ್ಷೇತ್ರ ಬೆಳವಣಿಗೆ ಆಗುತ್ತಿದೆ ಅವುಗಳನ್ನು ಉಪಯೋಗಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಬೆಳಗಾವಿಯ ನಬಾರ್ಡ ಡಿಡಿಎಮ್‌ ಎ.ಜಿ. ಮಾವಿನಕುರೆ ಹೇಳಿದರು.
ಅವರು ಭಾರತ ಫೌಂಡೇಶನ್‌ದ ಯಾದವಾಡ ದಾಲ್ಮೀಯಾ ಸಿಮೆಂಟ್‌ ಕಾರ್ಖಾನೆಯ ದಾಲ್ಮೀಯಾ ಕೌಶಲ್ಯ ಅಭಿವೃಧ್ಧಿ ಕಾರ್ಯಕ್ರಮದ ಅಡಿಯಲ್ಲಿ ಧೀಕ್ಷಾ ಕೌಶಲ್ಯ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಲ್ಲಿಗೆ ಬೆಳಗಾವಿಯಲ್ಲಿ ಗುರುವಾರ ಜರುಗಿದ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಮುದ್ರಾ ಯೋಜನೆ ಅಡಿ ಬ್ಯಾಂಕಿನಲ್ಲಿ ಸಾಲ ಪಡೆದುಕೋಂಡು ಸ್ವಂತ ಉದ್ದಿಮೆ ಪ್ರಾರಂಭಿಸಿ ಇತರರಿಗೆ ಉದ್ಯೋಗ ನೀಡಿ ಎಂದು ಶಿಬಿರಾರ್ಥಿಗಳಿಗೆ ಕೀವಿ ಮಾತು ಹೇಳಿದರು.
ಕಾರ್ಯಕ್ರಮ ನೇತೃತ್ವ ವಹಿಸಿದ್ದ ದಾಲ್ಮೀಯಾ ಕೌಶಲ್ಯ ಅಭಿವೃಧ್ಧಿ ಕೇಂದ್ರದ ಮುಖ್ಯಸ್ಥರು ಹಾಗೂ ಕಾರ್ಯಕ್ರಮ ಸಂಯೋಜಕರು ರವಿ ಬಿಸಗುಪ್ಪಿ ಮಾತನಾಡಿ, ಅತಿ ಕಡಿಮೆ ಮತ್ತು ರಿಯಾಹಿತಿ ದರದಲ್ಲಿ ಉನ್ನತ ಮಟ್ಟದ ತರಬೇತಿಗಳನ್ನು ನಿಡಲಾಗುತ್ತಿದೆ. ದೀಕ್ಷಾ ಕೌಶಲ್ಯಕೇಂದ್ರದಲ್ಲಿ ಆದುನೀಕ ತರಬೇತಿ ಉಪಕರಣಗಳು ಅಮತ್ತು ನುರಿತ ತರಬೇತಿದಾರರು ಹೋಂದಿರುವ ಕೇಂದ್ರವಾಗಿದೆ ಇಲ್ಲಿ ಹೆಚ್ಚು ಪ್ರಾಯೋಗಿತ್ಮಾಕವಾಗಿ ಕಲಿಸಿಗೊಡಲಾಗುತ್ತಿದೆ. ಜೋತೆಗೆ ವ್ಯಕ್ತಿತ್ವ ಬೇಳವನಿಗೆ ಕೌಶಲ್ಯ, ಆಂಗ್ಲ ಭಾಷೆ ಕೌಶಲ್ಯ ಹಾಗೂ ಕಂಪ್ಯೂಟರ ತರಭೆತಿಗಳನ್ನು ನೀಡಿ ಶೇ.100 ವಿವಿದ ಸಂಸ್ಥೆಗಳಲ್ಲಿ ಉದ್ಯೋಗ ಒದಗಿಸಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ತರಬೇತಿದಾರ ಶ್ರೀಮತಿ ಜ್ಯೋತಿ, ಕೆ.ಎಲ್‌.ಇ ಪ್ಯಾಷನ ಟೆಕ್ಕನ್ವಾಲಜಿ ಸಿಬ್ಬಂದಿ, ಕೇಂದ್ರದ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

loading...